ಬೆಂಗಳೂರು : ಒಂದು ಬಾಟಲಿಗೆ ನೀರು ಹಾಕೋತ್ತಾರೆ, ಅದಕ್ಕೆ ಅರ್ಧ ಎಣ್ಣೆ ಹಾಕೋತಾರೆ. ಆಟದ ಮೈದಾನ, ರಸ್ತೆಯಲ್ಲಿ, ಎಲ್ಲಾ ಕಡೆ ಓಡಾಡ್ತಾ ಕುಡೀತಾರೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ಬೇಸರಿಸಿದರು.
ಹಳ್ಳಿಗಳಲ್ಲಿನ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ವಿಚಾರ ಕುರಿತು ಸದನದಲ್ಲಿ ಕಾಂಗ್ರೆಸ್ ಶಾಸಕ ರಾಜು ಕಾಗೆ ಪ್ರಶ್ನೆ ಮಾಡಿದರು. ಈ ವೇಳೆ ಸಚಿವ ತಿಮ್ಮಾಪುರ್ ಉತ್ತರ ನೀಡಿದರು.
ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡ್ತಿದ್ದಾರೆ. ಈ ಬಗ್ಗೆ ಮಹಿಳೆಯರು ನಮಗೆ ಪ್ರಶ್ನೆ ಮಾಡ್ತಿದ್ದಾರೆ. ಘೇರಾವ್ ಕೂಡ ಹಾಕುತ್ತಿದ್ದಾರೆ. ಇದಕ್ಕೆ ಸರ್ಕಾರದಿಂದ ಏನು ಕ್ರಮ ಎಂದು ರಾಜು ಕಾಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ : ಬೆಳಗ್ಗೆ 90, ಸಂಜೆ 90 ಫ್ರೀ ಎಣ್ಣೆ ಕೊಡಿ : ಉಡುಪಿಯಲ್ಲಿ ವಿಭಿನ್ನ ಪ್ರತಿಭಟನೆ
ನಾಲ್ಕು ಕೇಸ್ ಗಳು ಹಾಕ್ತೀವಿ
ಆಗ ಸಚಿವ ತಿಮ್ಮಾಪುರ್ ಮಾತನಾಡಿ, ವ್ಯಾಪಾರ ವಹಿವಾಟು ಆಧಾರಿಸಿ ಎಂಎಸ್ಐಎಲ್ ಅವಕಾಶ ಕೊಟ್ಟಿದ್ದೇವೆ. ಇಲ್ಲಿಯವರೆಗೂ ಗ್ರಾಮೀಣ ಭಾಗದಲ್ಲಿ ಯಾವುದೇ ಲೈಸೆನ್ಸ್ ಕೊಟ್ಟಿಲ್ಲ. ಇನ್ನೂ ಎಂಎಸ್ಐಎಲ್ ನಿಂದ ಖರೀದಿ ಮಾಡಿ, ಹಳ್ಳಿಗಳ ಅಂಗಡಿಗಳಲ್ಲೂ ಮಾರಾಟ ಮಾಡ್ತಿರುವ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ನಾಲ್ಕು ಕೇಸ್ ಗಳು ಹಾಕ್ತೀವಿ ಎಂದು ಹೇಳಿದರು.
ಇದನ್ನು ಕಂಟ್ರೋಲ್ ಮಾಡ್ತೀನಿ
ಕದ್ದು ಮುಚ್ಚಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಮೈದಾನ, ಸ್ಕೂಲ್ ಗಳ ಬಳಿಯೂ ಕೆಲವರು ಮದ್ಯ ಕುಡಿಯುತ್ತಿದ್ದಾರೆ. ಎಣ್ಣೆ ಹಾಗೂ 10 ರೂ.ಗೆ ಶೇಂಗಾ ತಗೊಂಡು ಕುಡೀತಾರೆ. ಒಂದು ಬಾಟಲಿಗೆ ನೀರು ಹಾಕೋತ್ತಾರೆ, ಅದಕ್ಕೆ ಅರ್ಧ ಎಣ್ಣೆ ಹಾಕೋತಾರೆ. ಎಲ್ಲಾ ಕಡೆ ಓಡಾಡ್ತಾ ಕುಡೀತಾರೆ. ನಾನು ಇದರ ಬಗ್ಗೆ ಗೃಹ ಸಚಿವರ ಜೊತೆ ಮಾತಾಡಿ ಕಂಟ್ರೋಲ್ ಮಾಡ್ತೀನಿ ಎಂದು ಭರವಸೆ ನೀಡಿದರು.