ಬೆಂಗಳೂರು : ಕೆಲ ಬಿಜೆಪಿ ಶಾಸಕರು ನಮ್ಮ ಗ್ಯಾರಂಟಿ ಯೋಜನೆಯನ್ನು ಚೆನ್ನಾಗಿದೆ ಅಂದ್ರು, ಕೆಲವರು ಚೆನ್ನಾಗಿಲ್ಲ ಅಂತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಐದು ಉಚಿತ ಗ್ಯಾರಂಟಿ ಯೋಜನೆ ಜನರಿಗೆ ಉಪಯೋಗ ಆಗ್ತಿದೆಯೋ? ಇಲ್ವೋ? ಉಚಿತವಾಗಿ ಬಸ್‌ನಲ್ಲಿ ಓಡಾಡ್ತಿದ್ದಾರೆ, ಅವರನ್ನೇ ಹೋಗಿ ಕೇಳಲಿ ಎಂದು ಕುಟುಕಿದರು.
ಅಕ್ಕಿ ಬದಲು 34 ರೂ. ಸಾಲಲ್ಲ ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿ, ನಾನು ಮೊದಲು ಕೂಡ ಹೇಳಿದ್ದೇನೆ. ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಒಂದು ಮಾತಾಡ್ತಾರೆ. ಇವರಿಗೆ ವಿಪಕ್ಷ ನಾಯಕನ ಆಯ್ಕೆ ಮಾಡಲಾಗಿಲ್ಲ. ಈ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ಕೊಡಲು ಹೇಳಿ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ಟರು.
ಇದನ್ನೂ ಓದಿ : ವಿಧಾನಸಭೆಯ ಭವ್ಯ ಪರಂಪರೆಗೆ ಕಪ್ಪು ಚುಕ್ಕೆ ಅಂಟಿದೆ : ಪ್ರಿಯಾಂಕ್ ಖರ್ಗೆ
ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ
ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ. ಅವ್ರು ಅಕ್ಕಿ ಕೊಡದಿದ್ದಕ್ಕೆ ಅಲ್ಲವಾ DBT ಮಾಡ್ತಿದ್ದೇವೆ. ಅಕ್ಕಿ ಕೊಡಲು ಆಗದಿದ್ದರೆ ದುಡ್ಡು ಕೊಡಿ ಅಂತ ಬಿಜೆಪಿಯವರು ಹೇಳಿದ್ದರು. ನಾವು ದುಡ್ಡು ಕೊಡುತ್ತಿದ್ದೇವೆ. ಇದೀಗ, ನೀವು ಕೊಡುತ್ತಿರುವ ದುಡ್ಡು ಸಾಲಲ್ಲ ಎನ್ನುತ್ತಿದ್ದಾರೆ ಎಂದು ಛೇಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗದಿರೋ ವಿಚಾರ ಕುರಿತು ಮಾತನಾಡಿ, ಮಳೆ ವಾಡಿಕೆಯಷ್ಟು ಆಗುತ್ತಿಲ್ಲ. ಕಂದಾಯ ಸಚಿವರ ಜೊತೆ ಸಭೆ ನಡೆಸಿದ್ದೇವೆ. ಕುಡಿಯೋ ನೀರಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.