ಶಿವಮೊಗ್ಗ : ಹೊಸ ಗ್ಯಾರಂಟಿಗಳ ನಡುವೆ ಹಳೆಯ ಮತ್ತು ಅಗತ್ಯ ಗ್ಯಾರಂಟಿಗಳನ್ನು ಮರೆಯಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಬಜೆಟ್‍ನಲ್ಲಿ ಆಶಾದಾಯಕ ಹಾಗೂ ನಿರಾಶಾದಾಯಕ ಎರಡೂ ಇವೆ ಎಂದಿದ್ದಾರೆ.
ಹೊಸ ಸರ್ಕಾರ ಬಂದಿದೆ. ಬಜೆಟ್ ಕೂಡ ಮಂಡನೆಯಾಗಿದೆ. ಗ್ಯಾರಂಟಿಗಳಿಗೆ ಅನುಕೂಲವಾಗುವಂತಹ ಬಜೆಟ್ ಮಂಡನೆಯಾಗಿದೆ. ಬಜೆಟ್‍ಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಕೂಡ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಡವರ ಬಾಳಿಕೆ ಕೊಳ್ಳಿ ಇಟ್ಟ ಬಜೆಟ್ : ಪ್ರಲ್ಹಾದ್ ಜೋಶಿ
ಹಳೆಯ ಸರ್ಕಾರವನ್ನು ಟೀಕಿಸುವ ಕೆಲ್ಸ
ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಅದೇನೆಂದರೆ ಹಳೆಯ ಸರ್ಕಾರವನ್ನು ಟೀಕಿಸುವುದೂ ಆಗಿದೆ. ಬಜೆಟ್‍ನಲ್ಲಿ ಕಾರ್ಮಿಕ ಕ್ಷೇತ್ರಕ್ಕೆ ಒತ್ತುಕೊಟ್ಟಿಲ್ಲ. ಪೌರ ಕಾರ್ಮಿಕರ ಖಾಯಂ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಯುವಕರಿಗಾಗಿ ಯಾವ ಆಶ್ವಾಸನೆಗಳು ಇಲ್ಲ. ಕ್ರೀಡೆಗೆ ಆದ್ಯತೆ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ಏನೋ ಟೇಕಾಫ್ ಆಗಿದೆ
ಆಟೋ ಹಾಗೂ ಟ್ಯಾಕ್ಷಿ ಡ್ರೈವರ್ಗಳ ಪರವಾಗಿ ಕಲ್ಯಾಣ ಮಂಡಳಿ ರಚನೆ ಮಾಡುತ್ತೇವೆ. ವಿಮೆ ನೀಡುತ್ತೇವೆ ಎಂದಿದ್ದರು. ಅದಕ್ಕೂ ಬಜೆಟ್‍ನಲ್ಲಿ ಜಾಗವಿಲ್ಲ. ಸರ್ಕಾರಿ ಹಳೆ ಪಿಂಚಣಿ ಜಾರಿಗೆ ಸಮಿತಿ ರಚಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ. ಆ ಬಗ್ಗೆಯೂ ಪ್ರಸ್ತಾಪವಿಲ್ಲ. ನೌಕರರ ಏಳನೇ ವೇತನ ಜಾರಿಗೆ ಕ್ರಮ ಕೈಗೊಂಡಿಲ್ಲ. ಹೀಗೆ ಹಲವು ಹೊಣೆಗಾರಿಕೆಗಳು ಸರ್ಕಾರ ಮೇಲಿವೆ. ಸರ್ಕಾರ ಏನೋ ಟೇಕಾಫ್ ಆಗಿದೆ. ಆದರೆ, ಅದರ ಹಾರಟ ಮಾತ್ರ ನಿಲ್ಲಬಾರದು ಎಂದು ಕುಟುಕಿದ್ದಾರೆ.