Friday, November 22, 2024

ಮುನಿಗಳ ಹತ್ಯೆ ಹಿಂದಿರುವವರನ್ನು ರಕ್ಷಿಸುವ ಕೆಲಸ ಆಗ್ತಿದೆ : ಬೊಮ್ಮಾಯಿ ಆಕ್ರೋಶ

ಬೆಂಗಳೂರು : ಜೈನ ಮುನಿಗಳ ಹತ್ಯೆ ಹಿಂದಿರುವವರನ್ನು ರಕ್ಷಿಸುವ ಕೆಲಸ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ಹೊರಹಾಕಿದರು.

ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ನೀಡದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಎಲ್ಲಾ ಕೊಲೆಗಳಂತೆ ಇದನ್ನು ತೆಗೆದುಕೊಳ್ಳಬೇಡಿ ಎಂದು ಗರಂ ಆದರು.

ಜುಲೈ 5 ರಂದು ಮುನಿಗಳು ಕಾಣೆಯಾಗಿದ್ದಾರೆ. ಜುಲೈ 6 ರಂದು ಪ್ರಕರಣ ದಾಖಲಾಗಿದೆ. ಇದು ಕೇಳರಿಯದ ಅಕ್ಷ್ಯಮ್ಯ ಕೃತ್ಯ. ಎಲ್ಲ ಕೊಲೆಗಳನ್ನು ಒಂದೇ ರೀತಿ ನೊಡೋಕೆ ಸಾಧ್ಯವೇ? ಕೋಲ್ಡ್ ಬ್ಲಡೆಡ್ ಮರ್ಡರ್ ಇದು. ಎಲೆಕ್ಟ್ರಿಕ್ ಶಾಕ್ ಕೊಟ್ಟು ಕೊಲೆಗೈಯಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಮೂರು ಪಕ್ಷದವರು ಫಸ್ಟ್ ಬಾಯಿ ಮುಚ್ಚಿಕೊಂಡಿರಿ : ಮುತಾಲಿಕ್ ಗುಡುಗು

ಇದರ ಹಿಂದೆ ಬೇರೆ ಬೆಳವಣಿಗೆಗಳಿವೆ

ಎಲೆಕ್ಟ್ರಿಕ್ ಶಾಕ್ ಕೊಟ್ಟರೆ, ಇದರ ಹಿಂದೆ ಬೇರೆ ಬೆಳವಣಿಗೆಗಳಿವೆ. ಪೊಲೀಸರು ಶವವನ್ನು ಕಂಡು ಹಿಡಿದಿದ್ದಾರೆ. ಅದನ್ನು ನಾವು ಒಪ್ಪೋಣ, ಯಾವುದೇ ಸಂಶಯಬೇಡ. ಬಾಡಿ ಸಿಗುತ್ತಲೇ ಹಣಕಾಸು ವಿಚಾರ ತಂದ್ರು. ಇದರ ಹಿಂದಿರುವವರನ್ನು ರಕ್ಷಿಸುವ ಕೆಲಸ ಆಗ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಪೂರ್ವ ನಿಯೋಜಿತವಾದ ಕೃತ್ಯ

ಇಲ್ಲಿ ಪೊಲೀಸರೇ ಮುಚ್ಚಿಹಾಕ್ತಿದ್ದಾರೋ, ಒತ್ತಡದಿಂದಾಗಿ ಹಸ್ತಕ್ಷೇಪ ಮಾಡ್ತಿದ್ದಾರೆ ಗೊತ್ತಿಲ್ಲ. ಜೈನ ಮುನಿಗಳ ಹತ್ಯೆ ದೇಶದಲ್ಲೇ ಇದು ಪ್ರಥಮ. 9 ತುಕಡಿ (ತುಂಡು)ಮಾಡಿ ಬೋರ್ ವೆಲ್ ಗೆ ಹಾಕಿದ್ದಾರೆ. ಇದೊಂದು ಪೂರ್ವ ನಿಯೋಜಿತವಾದ ಕೃತ್ಯ. ಇದನ್ನು ಆಳವಾಗಿ ತನಿಖೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

RELATED ARTICLES

Related Articles

TRENDING ARTICLES