ದಕ್ಷಿಣ ಕನ್ನಡ : ಜಾಗದ ವಿಚಾರದ ತಕರಾರು ಹಿನ್ನಲೆ ಕೊರಗಜ್ಜನ ದೈವದ ಗುಡಿಗೆ ಮಾಲೀಕನೇ ಬೆಂಕಿ ಹಚ್ಚಿರುವ ಕಿಡಿಗೇಡಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವೇಣೂರಿನಲ್ಲಿ ಈ ಘಟನೆ ನಡೆದಿದೆ. ಕೃತ್ಯ ಖಂಡಿಸಿ ಕೊರಗಜ್ಜ ಸೇವಾ ಸಮಿತಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೇವಸ್ಥಾನದ ಬಗ್ಗೆ ಕೆಲವು ವರ್ಷಗಳಿಂದ ಸಮಿತಿ ಮತ್ತು ಖಾಸಗಿ ವ್ಯಕ್ತಿ ನಡುವೆ ತಗಾದೆ ಇತ್ತು. ಸಾರ್ವಜನಿಕರು ಸಮಿತಿ ರಚಿಸಿ ಪ್ರತಿ ವರ್ಷ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಆದರೆ, ದೇವಸ್ಥಾನ ಇರುವ ಜಾಗ ಖಾಸಗಿ ವ್ಯಕ್ತಿಯಾದ್ದಾಗಿದ್ದು ಅಲ್ಲಿನ ಜನರಿಗೆ ಅದು ಇಷ್ಟ ಆಗದೆ ಇರುವುದರಿಂದ ಆ ಜಾಗದ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೊರಗಜ್ಜನ ಮಹಿಮೆಗೆ ಮಾರು ಹೋದ ಉಕ್ರೇನ್ ದಂಪತಿ
ಈ ಭಾಗದ ಜನರಿಗೆ ಕೊರಗಜ್ಜನ ಮೇಲೆ ವಿಶೇಷವಾದ ನಂಬಿಕೆಯಿದೆ. ಅನಾದಿ ಕಾಲದಿಂದಲೂ ದೈವದ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ದೈವದ ಗುಡಿಗೆ ಬೆಂಕಿ ಇಟ್ಟು ಸುಟ್ಟು ಹಾಕಲು ಮುಂದಾಗಿರುವುದು ದುರ್ದೈವ.
ದೇವರು ಇರುವ ಸ್ಥಳ ಎನ್ನುವುದು ಗೊತ್ತಿದ್ದು ಜಾಗದ ಮಾಲೀಕ ಗುಡಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ ಘಟನೆಯನ್ನು ಕೊರಗಜ್ಜ ಸೇವಾ ಸಮಿತಿಯವರು ಖಂಡಿಸಿದ್ದಾರೆ. ಈ ಕೃತ್ಯದಿಂದ ಕೊರಗಜ್ಜ ದೈವನಿಗೆ ಅಗೌರವ ತೋರಿದ್ದಾರೆ ಎಂದು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.