ಮಂಡ್ಯ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್ಸಿಗರಿಗೆ ಯೋಗ್ಯತೆ ಬೇಕು ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗುಡುಗಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಯಾರು ಮುಖ್ಯಮಂತ್ರಿ ಮಗನಾ? ಎಂದು ಕಿಡಿಕಾರಿದರು.
ಐದು ಜನ ಕಾಂಗ್ರೆಸ್ ಶಾಸಕರಿಗೆ ನಾಚಿಕೆಯಾಗಬೇಕು. ಯಾರು ಈ ಚಲುವರಾಯಸ್ವಾಮಿ ಯಾರು? ಈತ ಏನು ಮುಖ್ಯಮಂತ್ರಿ ಮಗನಾ? ಈತ ಏನು ರಾಜ್ಯದ ದೊಡ್ಡ ನಾಯಕನಾ? ಈತ ಕ್ಲಾಸ್ 3 ಕಂಟ್ರಾಕ್ಟರ್. ಈತನನ್ನು ಜಿಲ್ಲಾ ಪಂಚಾಯತ್ ಸದಸ್ಯ ಮಾಡಿದ್ದು ಜೆಡಿಎಸ್. ಈತನನ್ನು ಎಂಎಲ್‌ಎ ಮಾಡಿದ್ದು ಜೆಡಿಎಸ್. ಈತನನ್ನು ಮಂತ್ರಿ ಮಾಡಿದ್ದು ಜೆಡಿಎಸ್ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಹೊರಗುತ್ತಿಗೆ ನೌಕರಿಯಲ್ಲೂ ಮೀಸಲಾತಿ ತರುವ ಚಿಂತನೆ : ಸಿದ್ದರಾಮಯ್ಯ
ನಿಮ್ಮನ್ನ ಗೆಲ್ಲಿಸಿ ತಪ್ಪು ಮಾಡಿದ್ರು
ಇವರ ಪಕ್ಷದ ನಾಯಕನನ್ನು ಬೆಂಬಲಿಸ ಬೇಕಾಗಿದ್ದು ನಿಮ್ಮ ಕರ್ತವ್ಯ. ರಾಜ್ಯದಲ್ಲಿ ಎರಡನೇ ನಾಯಕ ಮಾಡಿದ್ದು ಕುಮಾರಸ್ವಾಮಿ. ದೇವೇಗೌಡರ ಕುಟುಂಬ ಇವರಿಗೆ ಎಲ್ಲವೂ ಕೊಟ್ಟಿದೆ. ಇಂತಹ ಕುಟುಂಬದ ಬಗ್ಗೆ ಮಾತನಾಡುವುದು ತಪ್ಪು. ಗೆದ್ದಿದ್ದೇವೆ ಎಂದು ಇನ್ನೋಬ್ಬರ ಬಗ್ಗೆ ಮಾತಾಡುವುದು ಸರಿಯಲ್ಲ. ನಿಮ್ಮನ್ನ ಗೆಲ್ಲಿಸಿ ತಪ್ಪು ಮಾಡಿದೆವು ಅಂತ ಮಂಡ್ಯ ಜಿಲ್ಲೆಯ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
HDK ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ
ನಿಮ್ಮ ಯೋಗ್ಯತೆ ತಕ್ಕಂತೆ ಮಾತನಾಡಿ. ದೇವೇಗೌಡ್ರು, ಕುಮಾರಣ್ಣ ಬಗ್ಗೆ ಮಾತನಾಡೋದು ಸರಿಯಲ್ಲ. ಕುಮಾರಣ್ಣ ನಿಮ್ಮನ್ನ ಬೆಳೆಸಿದ್ದಾರೆ. ಮರ್ಯಾದೆ ಇಟ್ಟಿಕೊಂಡು ಪಕ್ಷದ ಬಗ್ಗೆ ಮಾತನಾಡಿ. ನರೇಂದ್ರ ಸ್ವಾಮಿ ವಿವೇಚನೆ ಇಟ್ಟಿಕೊಂಡು ಮಾತನಾಡಿ. ಪಕ್ಷಕ್ಕೆ ನಿಷ್ಟೆಯಿಲ್ಲದ ನೀವು ಜೆಡಿಎಸ್ ಬಗ್ಗೆ ಮಾತನಾಡ್ತೀರಿ. ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕುಮಾರಣ್ಣನ ಬಗ್ಗೆ ಮಾಗನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದು ರವೀಂದ್ರ ಶ್ರೀಕಂಠಯ್ಯ ವಾರ್ನಿಂಗ್ ಕೊಟ್ಟರು.