ದಾವಣಗೆರೆ: ಟ್ರೈನ್ ಬರುವುದಕ್ಕೆ ಇನ್ನೇನು ಕೆಲವು ಗಂಟೆಗಳು ಮಾತ್ರ ಬಾಕಿ ಇತ್ತು. ಎಲ್ಲಾರ ಗಮನ ರೈಲು ಬರುವ ಕಡೆಗೆ ಇತ್ತು. ಇದೇ ವೇಳೆ ವೃದ್ಧೆರೊಬ್ಬರು ಆರಾಮವಾಗಿ ರೈಲ್ವೆ ಫಾಟ್ಲ್ ಫಾರಂನಿಂದ ಕಳಗೆ ಇಳಿಯುತ್ತಿರುವಾಗ ದೊಡ್ಡ ಹಾರ್ನ್ ಮಾಡುತ್ತಾ ವಾಸ್ಕೋ ಟ್ರೈನ್ ಬಂದೇ ಬಿಟ್ಟಿತ್ತು.ಇನ್ನೇನು ವೃದ್ಧ ಸಿಕ್ಕಿಬಿಡುತ್ತಾನೆ ಅನುವಷ್ಟರಲ್ಲಿ ಫಾಟ್ಲ್ ಫಾರಂನಲ್ಲಿ ನಿಂತಿದ್ದ ಕಾನಸ್ಟೇಬಲ್ ಜಿಂಗಿದು ವೃದ್ದನ್ನು ಎಳೆದೊಯ್ದಿದ್ದಾರೆ.
ಹೌದು, ರೈಲ್ವೆ ಹಳಿಯನ್ನು ದಾಟುಲು ಹೋದ ವೃದ್ಧ ರೈಲು ಬರುವುದನ್ನು ಗಮನಿಸದೇ ಹಳಿ ದಾಟಲು ಹೋಗುತ್ತಿರುವ ಸಂದರ್ಭದಲ್ಲಿ ಇನ್ನೇನು ರೈಲು ಬಂದು ಡಿಕ್ಕಿ ಹೊಡೆಯುವಷ್ಟರಲ್ಲಿ ಗಸ್ತಿನಲ್ಲಿದ್ದ ಆರ್ ಪಿ ಎಫ್ ಕಾನಿಸ್ಟೇಬಲ್ ಶಿವಾನಂದ ರಂಗಪ್ಪರವನ್ನು ಆಪಾಯದಿಂದ ಪಾರುಮಾಡಿದ್ದಾರೆ.
ಇದನ್ನೂ ಓದಿ: ಹೊರಗುತ್ತಿಗೆ ನೌಕರಿಯಲ್ಲೂ ಮೀಸಲಾತಿ ತರುವ ಚಿಂತನೆ : ಸಿದ್ದರಾಮಯ್ಯ
ಇನ್ನೂ ಕೆಲ ಜನರು ರೈಲು ಬರುವುದನ್ನು ಗಮನಿಸದೆ ದಾಟಲು ಹೋಗಿ ಎಷ್ಟೋ ಜನ ತಮ್ಮ ಜೀವಗಳನ್ನೇ ಕಳೆದುಕೊಂಡಿದ್ದಾರೆ, ಅದೇ ರೀತಿಯಲ್ಲಿ ದಾವಣಗೆರೆಯಲ್ಲಿ ಅಂತದೆ ಒಂದು ಘಟನೆಯಿಂದ ವೃದ್ದ ರಂಗಪ್ಪನ್ನು ಪಿ ಎಫ್ ಕಾನಸ್ಟೇಬಲ್ ಕಾಪಾಡಿದ್ದಾನೆ.
ಘಟನೆಯ ಹಿನ್ನಲೆ
ರಂಗಪ್ಪ ಎಂಬ ವೃದ್ದ ವಾಸ್ಕೋ ಟ್ರೈನ್ ಬರುವುದನ್ನು ಗಮನಿಸದೆ ರೈಲ್ವೆ ಹಳಿ ಬಳಿ ದಾಟಲು ಹೋಗಿ ಜೀವಕ್ಕೆ ಕುತ್ತು ತೆಗೆದುಕೊಂಡಿದ್ದ, ಆದರೆ ಅವನ ಪುಣ್ಯಕ್ಕೆ ಸರಿಯಾದ ಸಮಯದಲ್ಲಿ ಆರ್ ಪಿ ಎಫ್ ಕಾನಿಸ್ಟೇಬಲ್ ರವರು ವೃದ್ಧನನ್ನು ಕಾಪಡಿ ಅವನ ಪ್ರಾಣವನ್ನು ಉಳಿಸಿದ್ದಾರೆ. ಆರ್ ಪಿ ಎಫ್ ಕಾನಸ್ಟೇಬಲ್ ಶಿವಾನಂದ ರವರ ಸಮಯಪ್ರಜ್ಙೆಗೆ ನಿಲ್ದಾಣದಲ್ಲಿ ನಿಂತಿದ್ದ ಸಾರ್ವಜನಿಕರು ಹಾಗೂ ಆರ್ ಪಿ ಎಫ್ ಸಿಬ್ಬಂದಿಗಳು, ಮತ್ತು ಅಲ್ಲೆ ನಿಂತಿದ್ದ ರೈಲ್ವೆ ಪೋಲಿಸರು ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದರು.