ಶಿವಮೊಗ್ಗ: ಮೊಬೈಲ್ ನಲ್ಲಿ ಮಾತನಾಡುತ್ತ ಬಸ್ ಚಾಲನೆ ಮಾಡಿದ ಚಾಲಕನಿಗೆ ಟ್ರಾಫಿಕ್ ಪೊಲೀಸರು 5 ಸಾವಿರ ದಂಡ ವಿಧಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇದನ್ನೂ ಓದಿ: ಇಂದಿನಿಂದ ವಿದ್ಯಾರ್ಥಿಗಳಿಂದ ಉಚಿತ ಹಾಗೂ ರಿಯಾಯಿತಿ ಬಸ್ಪಾಸ್ಗೆ ಅರ್ಜಿ ಆಹ್ವಾನ
ಗಜಾನನ ಬಸ್ ಚಾಲಕ ಮನ್ಸೂರ್. ಜು.6 ರಂದು ಶಿವಮೊಗ್ಗ – ತೀರ್ಥಹಳ್ಳಿ ನಡುವೆ ಸಂಚರಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ. ಡ್ರೈವರ್ ಪಕ್ಕದಲ್ಲಿ ಕೂಳಿತಿದ್ದ ಪ್ರಯಾಣಿಕ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಣ ಮಾಡಿ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದರು.
ಈ ವಿಡಿಯೋವನ್ನು ಪರಿಶೀಲಿಸಿದ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಸಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದಕ್ಕೆ 5,000 ರೂ. ದಂಡ ವಿಧಿಸಿದ್ದಾರೆ.