ಬೆಂಗಳೂರು : ಶಿಕ್ಷಕ ಹುದ್ದೆ ನೇಮಕಾತಿ ಆದೇಶ ಕೋರಿ ಬಿಸಿಲು, ಮಳೆಯನ್ನದೇ ತುಂಬು ಗರ್ಭಿಣಿ ಸೇರಿದಂತೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನೀತಿ ಮತ್ತು ನೇಮಕಾತಿ ಆದೇಶವನ್ನು ಕೋರಿ ಪ್ರತಿಭಟನೆ ಮಾಡುತ್ತಿದ್ದಾರೆ.
ಧರಣಿಯಲ್ಲಿ ತುಂಬು ಗರ್ಭಿಣಿ, ಅಂಗವಿಕಲರು ಸೇರಿದಂತೆ ಪುಟ್ಟ ಮಕ್ಕಳ ತಾಯಂದಿರು ಸೇರಿದಂತೆ 2000ಕ್ಕೂ ಹೆಚ್ಚು ಅಭ್ಯರ್ಥಿಗಳು (ಆಕಾಂಕ್ಷಿಗಳು) ಧರಣಿ ನಡೆಸುತ್ತಿದ್ದಾರೆ.
ಇದನ್ನೂ ಓದಿ : ವರುಣಾ ನಿರುದ್ಯೋಗಿ ಹಸ್ತಕ್ಷೇಪ ಮಿತಿ ಮೀರಿದೆ : ಬಿಜೆಪಿ ಲೇವಡಿ
ಅನಿರ್ದಿಷ್ಟಾವಧಿ ಧರಣಿ ಮಾಡ್ತೀವಿ
ನಮಗೆ ನೇಮಕಾತಿ ಆದೇಶ ಪ್ರತಿ ಬರುವವರೆಗೂ ನಾವು ಯಾವುದೇ ಕಾರಣಕ್ಕೂ ಈ ಜಾಗವನ್ನು ಬಿಟ್ಟು ಏಳುವುದಿಲ್ಲ. ಇದು ಸರ್ಕಾರದ ವಿರುದ್ಧ ನಡೆಯುತ್ತಿರುವ ಶಾಂತಿಯುತ ಧರಣಿ ಎಂದು ಪ್ರತಿಭಟನಾ ನಿರತ ಅಭ್ಯರ್ಥಿಗಳು ತಿಳಿಸಿದರು.
ಒಟ್ಟು 13,000 ಶಿಕ್ಷಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪ್ರತಿಯನ್ನು ನೀಡಬೇಕು. ಇಲ್ಲದಿದ್ದರೆ ನಾವು ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.