Saturday, November 23, 2024

ಸಮರ್ಪಕ ಬಸ್ ವ್ಯವಸ್ಥೆಗಾಗಿ ರಸ್ತೆ ನಡೆಸಿ ವಿದ್ಯಾರ್ಥಿಗಳ ಆಕ್ರೋಶ…

ವಿಜಯಪುರ : ಬಸ್ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತಿದೆ, ಸರಿಯಾದ ಸಮಯದಲ್ಲಿ ಬಸ್ ಬರದೇ ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ವಿಜಯಪುರದಲ್ಲಿ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಜ್ಯದಲ್ಲಿ ಬಸ್​ಗಳ ಸಂಖ್ಯೆಯು ಕಡಿಮೆಯಾಗಿದೆ ಈ ಕಾರಣಕ್ಕಾಗಿ ರಾಜ್ಯದ ವಿವಿಧೆಡೆ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯಲ್ಲಿ ತೀವ್ರ ಹಿನ್ನಡೆಯಾಗುತ್ತಿದ್ದು ವಿಜಯಪುರದಲ್ಲಿಯೂ ಅದೇ ಸಮಸ್ಯೆ ಎದುರಾಗಿದೆ.

ತಾಲೂಕಿನ ಕಗ್ಗೋಡ ಗ್ರಾಮದ ಬಳಿ ಬಸ್ ಹಾಗೂ ಇತರ ವಾಹನಗಳನ್ನು ತಡೆದು ಸಮರ್ಪಕ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ರಸ್ತೆ ತಡೆದು ವಿಧ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಬೇಕೆ ಬೇಕು ಬಸ್ ಬೇಕೆಂಬ ಘೋಷಣೆಯನ್ನು ಕೂಗಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ನಿಗದಿತ ಸಮಯದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

ವಿಧ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ಗ್ರಾಮಸ್ಥರೂ ಸಹ ಬೆಂಬಲಿಸಿದುದು ವಿಶೇಷವಾಗಿತ್ತು. ಪ್ರತಿಭಟನೆಗೆ ವಿಜಯಪುರ ಗ್ರಾಮೀಣ ಪೋಲಿಸರು ವಿರೋಧಿಸಿದ್ದರೂ ಸಹ ಜಗ್ಗದ ವಿದ್ಯಾರ್ಥಿಗಳು ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

RELATED ARTICLES

Related Articles

TRENDING ARTICLES