Friday, November 22, 2024

ಡಿಕೆಶಿ-ಸಿದ್ದರಾಮಯ್ಯ ಬಹಳ ಅನ್ಯೋನ್ಯವಾಗಿದ್ದಾರೆ : ಚಲುವರಾಯಸ್ವಾಮಿ ಡ್ಯಾಮೇಜ್ ಕಂಟ್ರೋಲ್

ಮಂಡ್ಯ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಬಹಳ ಅನ್ಯೋನ್ಯವಾಗಿದ್ದಾರೆ ಎನ್ನುವ ಮೂಲಕ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಡ್ಯಾಮೇಜ್ ಕಂಟ್ರೋಲ್ ಹೇಳಿಕೆ ನೀಡಿದರು.

ಡಿಕೆಶಿ ಸಿಎಂ ಸ್ಥಾನಕ್ಕೆ ಟವಲ್ ಹಾಕಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಅವರು, ಯಾವುದೇ ಪಕ್ಷದಲ್ಲಿ ಇಷ್ಟೊಂದು ಅನ್ಯೋನ್ಯವಾಗಿ ಇರುತ್ತಿರಲ್ಲಿಲ್ಲ. ಡಿ.ಕೆ ಶಿವಕುಮಾರ್ ಏನಾದ್ರು ಟವಲ್ ಹಾಕಿದ್ದೀನಿ ಅಂದ್ರಾ? ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಆಗಿರ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಆ ವಿಚಾರ ನಿಮಗೇಕೆ? ನೀವೇನಾದ್ರು‌ ಆಡಿಟಿಂಗ್ ಮಾಡ್ತೀರಾ? ಮಾಡ್ತೀನಿ ಅಂದ್ರೆ ಹೇಳ್ತೇನೆ. ವಿರೋಧ ಪಕ್ಷಕ್ಕೆ ಆ ವಿಚಾರ ಯಾಕೆ? ಅವರಿಗೆ ಸಂಭದವಿಲ್ಲ. 5 ವರ್ಷವೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುತ್ತೆ.

ಇದನ್ನೂ ಓದಿ : ಸಿದ್ರಾಮಯ್ಯ ಕುರ್ಚಿ ಖಾಲಿ ಮಾಡಲ್ಲ, ಡಿಕೆಶಿಗೆ ಕುರ್ಚಿ ಸಿಗಲ್ಲ : ಶಾಸಕ ಯತ್ನಾಳ್ ಭವಿಷ್ಯ

ಪಕ್ಷ ವಿಸರ್ಜನೆ ಮಾಡ್ತೀನಿ ಅಂದಿದ್ರು

ಸಿದ್ದರಾಮಯ್ಯನವರು 135 ಸೀಟ್ ತೆಗೆದುಕೊಂಡು ಗೌರವಯುತವಾಗಿ ಸರ್ಕಾರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ 123 ಸೀಟ್ ಗೆದ್ದು ಸರ್ಕಾರ ರಚನೆ ಮಾಡ್ತೀನಿ ಅಂತ ಹೇಳಿದ್ರು. ಸರ್ಕಾರ ರಚನೆ ಮಾಡಲಿಲ್ಲ ಅಂದ್ರೆ ಪಕ್ಷವನ್ನು ವಿಸರ್ಜನೆ ಮಾಡ್ತೀನಿ ಅಂದಿದ್ರು. ಕುಮಾರಸ್ವಾಮಿ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ, ಅವರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಕುಮಾರಸ್ವಾಮಿ ದಾಖಲೆ ರಿಲೀಸ್ ಮಾಡಲಿ,  ಯಾರು ಬೇಡಾ ಅಂದ್ರು ಎಂದು ಸವಾಲೆಸೆದರು.

ಅವ್ರ ಬುಟ್ಟಿಯಲ್ಲಿ‌ ಹಾವು ಇದ್ಯೋ?

ಕುಮಾರಸ್ವಾಮಿಯವರನ್ನು ಜೊತೆಯಲ್ಲಿ ಇದ್ದೂ ನೋಡಿದ್ದೀನಿ. ದೂರದಲ್ಲೂ ಇದ್ದು ನೋಡಿದ್ದೀನಿ. ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡೋದನ್ನು ಯಾರು ತಡೆಯಲು‌ ಆಗಲ್ಲ. ಮೊದಲು ದಾಖಲೆಗಳನ್ನು ದೊಡ್ಡದಾಗಿ ಇಟ್ಟುಕೊಳ್ಳೋರು, ಒಂದು‌ ದಾಖಲೆಯನ್ನು‌ ಬಿಡುಗಡೆ ಮಾಡಿಲ್ಲ. ನಾಳೆಯೇ ಅವರು ದಾಖಲೆಗಳನ್ನು ಬಿಡುಗಡೆ ಮಾಡಲಿ. ಅದಕ್ಕೆ ಏನು‌ಬೇಕು ನಾನು ಉತ್ತರ ಕೊಡ್ತೀವಿ. ಅವರ ಬುಟ್ಟಿಯಲ್ಲಿ‌ ಹಾವು ಇದ್ಯೋ?‌ ಇಲ್ಲವೋ‌? ಅನ್ನೋದು ಬಿಡುಗಡೆ ಮಾಡಿದ್ರೆ ಗೊತ್ತಾಗುತ್ತೆ. ಅವರು ಹೇಳೋದು ಸತ್ಯ ಆಗಿದ್ರೆ ನಮ್ಮ ಪಕ್ಷ‌‌‌ ಹಿಂದೆ ಮುಂದೆ‌ ನೋಡಲ್ಲ ಎಂದು ಟಕ್ಕರ್ ಕೊಟ್ಟರು.

RELATED ARTICLES

Related Articles

TRENDING ARTICLES