ಬೆಂಗಳೂರು : ಗೃಹಜ್ಯೋತಿ ಯೋಜನೆಯಡಿ ಒಂದಕ್ಕಿಂತ ಹೆಚ್ಚು ಮೀಟರ್ ಗಳಿಗೆ ಅರ್ಜಿ ಸಲ್ಲಿಸಿದ್ದರೆ ಅಂಥ ಅರ್ಜಿ ವಜಾಗೊಳಿಸಲಾಗುವುದು ಎಂದು ಬೆಸ್ಕಾಂ ಎಂ.ಡಿ ಮಹಂತೇಶ್ ಬೀಳಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಎಸ್ಎಸ್ಎಲ್ಸಿ ಪೂರಕಪರೀಕ್ಷೆ ಮರುಎಣಿಕೆಗೆ ಅರ್ಜಿ ಸಲ್ಲಿಕೆ ಆರಂಭ
ನಗರದ ಬೆಸ್ಕಾಂ ಕಛೇರಿಯಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಗ್ರಾಹಕರು ಒಂದು ಮೀಟರ್ ಗಿಂತ ಹೆಚ್ಚು ಮೀಟರ್ಗಳಿಗೆ ಅರ್ಜಿ ಸಲ್ಲಿಸಿದ್ದರೇ ಪರಿಶೀಲನೆ ನಡೆಸಿ ಅಮಾನ್ಯಗೊಳಿಸಲಾಗುವುದು ಎಂದಿದ್ದಾರೆ.
ಗೃಹಜ್ಯೋತಿ ಯೋಜನೆ ದುರ್ಬಳಕೆಯಾಗಬಾರದು ಎಂದು ಕಾರಣಕ್ಕೆ ಇ-ಗವರ್ನೆನ್ಸ್ ಮೂಲಕ ಈಗಾಗಲೇ ಸಲ್ಲಿಯಾಗಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಒಂದಕ್ಕಿಂತ ಹೆಚ್ಚು ಮೀಟರ್ ಗಳಿಗೆ ಅರ್ಜಿಗಳು ಬಂದಿದ್ದರೇ ಅಮಾನ್ಯಗೊಳಿಸಲಾಗುವುದು ಮತ್ತು 200 ಯೂನಿಟ್ ಒಳಗಿರುವ ಮೀಟರ್ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ.