ಬೆಂಗಳೂರು: ರಾಜಕೀಯ ಪಕ್ಷಗಳನ್ನು ಒಡೆಯಲು ಮೋದಿ ಸರ್ಕಾರಕ್ಕೆ ಪೂರ್ತಿ ಸಮಯವಿದೆ. ಆದರೆ ಸಶಸ್ತ್ರ ಪಡೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಮಯವಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಹೌದು,ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗಳ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ. ಈ ಕುರಿತ ಟ್ವೀಟ್ ಮಾಡಿರುವ ಅವರು, “ರಾಜಕೀಯ ಪಕ್ಷಗಳನ್ನು ಒಡೆಯಲು ಮೋದಿ ಸರ್ಕಾರಕ್ಕೆ ಪೂರ್ತಿ ಸಮಯವಿದೆ. ಆದರೆ ಸಶಸ್ತ್ರ ಪಡೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಮಯವಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ಡೈಲಾಗ್ ಹೊಡೆದು ಗೆದ್ದು ಬಿಟ್ರೆ ಸಾಕಾ? : ಪ್ರದೀಪ್ ಈಶ್ವರ್ಗೆ ಸುಧಾಕರ್ ಪಂಚ್
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ
“ದಿನನಿತ್ಯ ‘ರಾಷ್ಟ್ರೀಯತೆ’ ಎಂದು ಕಹಳೆ ಮೊಳಗಿಸುವವರು ನಮ್ಮ ಸಶಸ್ತ್ರ ಪಡೆಗಳಿಗೆ ಇನ್ನಿಲ್ಲದಂತೆ ದ್ರೋಹ ಮಾಡಿದ್ದಾರೆ. ಪ್ರಸ್ತುತ, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.
ಮೋದಿ ಸರ್ಕಾರದ ಬಳಿ ನಮ್ಮ ಸೈನಿಕರಿಗೆ ನೀಡಲು ಹಣವಿಲ್ಲ
ಮೋದಿ ಸರ್ಕಾರದ ಬಳಿ ನಮ್ಮ ಸೈನಿಕರಿಗೆ ನೀಡಲು ಹಣವಿಲ್ಲ ಎಂಬುದನ್ನು ಅಗ್ನಿಪಥ್ ಯೋಜನೆ ನೀತಿಯ ಮೂಲಕ ಸ್ಪಷ್ಟವಾಗಿ ಒಪ್ಪಿಕೊಂಡಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
Modi Govt has all the time to break political parties, but it has NO time to fill in important vacancies in the Armed Forces.
Those who trumpet 'Nationalism' on a daily basis, have betrayed our Armed Forces like no other !
▪️ Currently, there are more than 2 lakh vacancies in… pic.twitter.com/qrWRkAYt31
— Mallikarjun Kharge (@kharge) July 3, 2023
ಟ್ವಿಟರ್‌ನಲ್ಲಿ ಹುದ್ದೆ ಖಾಲಿಯಿರುವ ಬಗ್ಗೆ ಭಾವಚಿತ್ರ ಹಂಚಿಕೊಂಡಿರುವ ಅವರು, ಭೂಸೇನೆಯಲ್ಲಿ ಅಧಿಕಾರಿಗಳು ಸೇರಿದಂತೆ 1.25 ಲಕ್ಷ, ಭಾರತೀಯ ನೌಕಾ ಸೇನೆಯಲ್ಲಿ 13 ಸಾವಿರಕ್ಕೂ ಹೆಚ್ಚು ಹಾಗೂ ವಾಯು ಸೇನೆಯಲ್ಲಿ 6 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.