ಬೆಂಗಳೂರು : 2023-24 ಸಾಲಿನ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೊಳಿಸಿ ಶಿಕ್ಷಣ ಇಲಾಖೆಯೂ ಹೊಸದಾಗಿ ಸೇರ್ಪಡೆ ಮಾಡಿರುವ ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದ ಪಠ್ಯಗಳ ಪ್ರತಿ ಪವರ್ ಟಿವಿಗೆ ಲಭ್ಯವಾಗಿದೆ.
ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ತಲಾ 9 ಪಾಠ ಸೇರ್ಪಡೆ ಮಾಡಲಾಗಿದ್ದು ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ, ವೇದ ಕಾಲದ ಸಂಸ್ಕೃತಿ ಪಾಠ, ಹೊಸ ಧರ್ಮಗಳ ಉದಯ ಪಾಠ ಬದಲಾವಣೆ ಮಾಡಲಾಗಿದೆ.
ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-2 ರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳೂ ಪಾಠ ಪರಿಷ್ಕರಣೆ ಮಾಡಿ ಬದಲಾಯಿಸಲಾಗಿದೆ.
ಏಳನೇ ತರಗತಿಯ ಸಮಾಜ ವಿಜ್ಞಾನ ಭಾಗ 01 ರಲ್ಲಿ ಜಗತ್ತಿನ ಪ್ರಮುಖ ಘಟನೆಗಳು, ಮೈಸೂರು ಮತ್ತು ಇತರ ಸಂಸ್ಥಾನಗಳು, ಸಮಾಜ ವಿಜ್ಞಾನ ಭಾಗ 2 ರಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು, ಸ್ವಾತಂತ್ರ್ಯ ಸಂಗ್ರಾಮ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ : 4,000 ಪೊಲೀಸ್ ಪೇದೆ, 400 ಸಬ್ ಇನ್ಸ್ಪೆಕ್ಟರ್ ಹುದ್ದೆ ಭರ್ತಿ ಕಾರ್ಯ ಶುರು
ಹತ್ತನೇ ತರಗತಿಯ ಸಮಾಜ ವಿಜ್ಞಾನ ಭಾಗ 1 ರಲ್ಲಿ ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಪಾಠಗಳನ್ನು ಪರಿಷ್ಕರಿಸಲಾಗಿದೆ.
ಇನ್ನೂ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ :
ಆರನೇ ತರಗತಿಯ ಕನ್ನಡ ವಿಷಯದಲ್ಲಿ ನೀ ಹೋದ ಮರುದಿನ- ಕೃತಿಕಾರ- ಚೆನ್ನಣ್ಣ ವಾಲೀಕಾರ, ಏಳನೇ ತರಗತಿ- ಸಾವಿತ್ರಿಬಾಯಿ ಪುಲೆ- ಡಾ ಎಚ್.ಎಸ್ ಅನುಪಮ.
ಎಂಟನೇ ತರಗತಿ- ಮಗಳಿಗೆ ಬರೆದ ಪತ್ರ- ಜವಾಹರಲಾಲ್ ನೆಹರು.
ಹತ್ತನೇ ತರಗತಿ- ಸುಕುಮಾರ ಸ್ವಾಮಿಯ ಕಥೆ- ಶಿವಕೋಟ್ಯಾಚಾರ್ಯ, ಯುದ್ಧ- ಸಾ.ರಾ.ಅಬುಬಕ್ಕರ್, ವೀರಲವ- ಲಕ್ಷ್ಮೀಶ. ಪಠ್ಯಗಳನ್ನು ಪರಿಷ್ಕರಿಸಿ ಸೇರ್ಪಡೆ ಮಾಡಲಾಗಿದೆ.
ಕನ್ನಡ ದ್ವಿತೀಯ ಭಾಷೆ ವಿಷಯದಲ್ಲಿ : ಎಂಟನೇ ತರಗತಿ ಬ್ಲಡ್ ಗ್ರೂಪ್- ಕೃತಿಕಾರರು- ವಿಜಯಮಾಲಾ, ಒಂಬತ್ತನೇ ತರಗತಿ – ಉರುಸುಗಳಲ್ಲಿ ಭಾವೈಕತೆ- ದಸ್ತಗೀರ ಅಲ್ಲೀಭಾಯಿ ಪಾಠ ಸೇರ್ಪಡೆ ಮಾಡಲಾಗಿದೆ.