ಬೆಂಗಳೂರು : ಸಿದ್ದರಾಮಯ್ಯಗೆ ಹೇಳಿ, ನಾನು ಏನು ಚಪ್ಪರಾಸಿ ತರ ಕೂತಿದ್ದೇನೆ ಅಂದ್ಕೊತ್ತಾರಾ ಅವ್ರು? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಚಪ್ಪರಾಸಿ ಅಲ್ವಲ್ಲಾ? ಎನ್ನುವ ಮೂಲಕ ಸಿದ್ದರಾಮಯ್ಯಗೆ ಚಪ್ಪರಾಸಿ ಪದ ಬಳಕೆ ಮಾಡಿದರು.
ಸಿದ್ದರಾಮಯ್ಯ ಅವರು ಮೋಸ್ಟ್ ಎಕ್ಸಿಪಿರಿಯನ್ಸ್ ಚೀಫ್ ಮಿನಿಸ್ಟರ್ ತಾನೇ. ಎಲ್ಲ ದರವನ್ನು ಇಳಿಸುವ ತಾಕತ್ತು ಅವರಿಗೆ ಇದೆ ಅಲ್ವಾ? ಇವ್ರು ಒಂದು ಮಾದರಿ ಆಗಬೇಕು ಅಂದರೆ, ಎಲ್ಲ ದರವನ್ನು ಇಳಿಕೆ ಮಾಡಬೇಕು ಎಂದು ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸಂಬಂಧ ಸಿಎಂ ನೀಡಿದ್ದ ಹೇಳಿಕೆಗೆ ಸಿ.ಟಿ ರವಿ ಟಾಂಗ್ ಕೊಟ್ಟರು.
ಇದನ್ನೂ ಓದಿ : ಆಸಿಡ್ ದಾಳಿಗೊಳಗಾದ ಸಂತ್ರಸ್ತೆಗೆ ಕೆಲಸ ನೀಡಿದ ಸಿದ್ದರಾಮಯ್ಯ
10 ಕಿಲೋಗೆ 500 ರೂ. ಕೊಡಬೇಕು
5 ಕಿಲೋ ಅಕ್ಕಿಗೆ ಹಣ ನೀಡುವ ಸರ್ಕಾರದ ನಿರ್ಣಯ ವಿಚಾರ ಕುರಿತು ಮಾತನಾಡಿ, ಸಿದ್ದರಾಮಯ್ಯ ನವರಿಗೆ ಲೆಕ್ಕ ಹೇಳಿಕೊಡಬೇಕಾ? 10*34 ಎಷ್ಟು ರೂಪಾಯಿ ಆಗುತ್ತದೆ. ಸದನದಲ್ಲಿ ಲೆಕ್ಕದ ಬಗ್ಗೆ ಪಾಠ ಮಾಡೋರಿಗೆ ಲೆಕ್ಕ ಗೊತ್ತಿಲ್ವೇ? ಸುಮ್ಮನೆ ಇವ್ರು ಏನು ಕೊಡಲ್ಲ, ಈಗಾಗಲೇ ಏರಿಸಿದ್ದೆಲ್ಲ ಏರಿಸಿದ್ಸಾರೆ. ಹೀಗಾಗಿ, ಏರಿಸಿದರ ತಕ್ಕಂತೆ 10 ಕಿಲೋಗೆ 500 ರೂಪಾಯಿ ಕೊಡಬೇಕು ಎಂದು ಕುಟುಕಿದರು.
ಅವ್ರು ಎಲ್ಲ ನಿರುದ್ಯೋಗಿಗಗಳು ಅಂತ ಹೇಳಿದ್ದಾರೆ. ಅವರದು ಎರಡು ನಾಲಿಗೆ ಅಲ್ಲ ಅಲ್ವಾ? ಇವಾಗ ಅವ್ರು ಎರಡು ನಾಲಿಗೆ ಅಲ್ಲ ಅಂತ ತೋರಿಸಬೇಕು. ವಿದ್ಯುತ್ ದರ ಇಳಿಸುವ ಜವಬ್ದಾರಿ ಇವರದೇ. ನಾಳೆ ಬೆಳಗ್ಗೆ ಮನೆ ಮನೆಗೆ 5 ರೂಪಾಯಿ ಟೊಮೊಟೊ ಮಾಡುವ ತಾಕತ್ ಇದೆ. ಅವರು ಮನಸ್ಸು ಪಟ್ರೆ ಎಲ್ಲ ದರವನ್ನು ಇಳಿಕೆ ಮಾಡಬಹುದು ಎಂದು ಛೇಡಿಸಿದರು.