ಚಿಕ್ಕಮಗಳೂರು: ಈಗಲೇ ಮುಂಗಾರು ಆರಂಭವಾದರೂ ಹಲವೆಡೆ ಮಳೆಯೇ ಬಂದಿಲ್ಲ. ಇದರಿಂದ ಬೇಸತ್ತು ಜನರು ಸಂಪ್ರದಾಯಗಳ ಮೋರೆ ಹೋಗಿದ್ದಾರೆ.
ಹೌದು, ಮಲೆನಾಡು ಭಾಗದಲ್ಲಿ ಮಳೆ ಇಲ್ಲದ ಕಾರಣ ಜನರು ಗಡಿ ಮಾರಿಗೆ ವಿಶೇಷ ಪೂಜೆ ನಡೆಸಿದ್ದಾರೆ. ಎನ್.ಆರ್.ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ ಮಾಡಿದ್ದು, 10 ವರ್ಷಗಳ ಬಳಿಕ ಮಳೆಗಾಗಿ ಗಡಿ ಮಾರಿಗೆ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಟ್ರಿಪ್ ಹೋದ ಹೆಂಡ್ತಿ ಬಂದಿಲ್ಲ ಅಂತ ಬಸ್ ಟೈರ್ ಗೆ ತಲೆ ಕೊಟ್ಟ ಗಂಡ
ಮಲೆನಾಡು ಭಾಗದಲ್ಲಿ ಪ್ರತಿ ವರ್ಷದ ವಾಡಿಕೆ ಮಳೆಯೂ ಆಗಿಲ್ಲ. ಹೀಗಾಗಿ ಕಾದುಕಾದು ಮಲೆನಾಡಿನ ರೈತ ಸಮುದಾಯ ಗಡಿಮಾರಿ ಮೊರೆ ಹೋಗಿದೆ. ಗ್ರಾಮದ ಗಡಿಯಲ್ಲಿ ಗಡಿಮಾರಿಗೆ ಪೂಜೆ ಮಾಡಿ ಮತ್ತೊಂದು ಗ್ರಾಮದ ಗಡಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.