ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಮುಗಿಸಿ 2 ದಿನಗಳ ಈಜಿಪ್ಟ್ ಪ್ರವಾಸಕ್ಕೆ ತೆರಳಿದ್ದಾರೆ.
ಕೈರೋ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಆತ್ಮೀಯ ಸ್ವಾಗತ ಕೋರಲಾಗಿದೆ. ಈಜಿಪ್ಟ್ ಪ್ರಧಾನಿ ಮುಸ್ತಾಫಾ ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ಮೋದಿಯನ್ನ ಬರಮಾಡಿಕೊಂಡಿದ್ದಾರೆ. ಮೋದಿಯನ್ನು ಆತ್ಮೀಯವಾಗಿ ಆಲಿಂಗಿಸಿ ಸ್ವಾಗತ ಕೋರಿದ್ದಾರೆ.
1997ರ ಬಳಿಕ ಅಂದರೆ 26 ವರ್ಷಗಳ ಬಳಿಕ ಈಜಿಪ್ಟ್ ಪ್ರವಾಸ ಮಾಡಿದ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಈಜಿಪ್ಟ್‌ನಲ್ಲಿ ಹಲವು ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ.
ಇದನ್ನೂ ಓದಿ : ಅಮೆರಿಕ ಸೆನೆಟ್ ನಲ್ಲೂ ‘ನಮೋ’ ಜಪ : 79 ಬಾರಿ ಚಪ್ಪಾಳೆ, 15 ಬಾರಿ ಎದ್ದು ನಿಂತು ಗೌರವ
اشكر رئيس الوزراء معالي مصطفى مدبولي على اللفته الخاصه بالترحيب بي في المطار. اتمنى ان تزدهر العلاقات الهندية المصرية بما يحقق النفع لشعبي امتينا. pic.twitter.com/G8rWaf3AdY
— Narendra Modi (@narendramodi) June 24, 2023
ನಾಳೆ ಪ್ರಧಾನಿ ಮೋದಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. 2023ರ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ರಾಷ್ಟ್ರಪತಿ ಭಾರತದ ವಿಶೇಷ ಅತಿಥಿಯಾಗಿದ್ದರು. ಇದೀಗ 6 ತಿಂಗಳ ಬಳಿಕ ಪ್ರಧಾನಿ ಮೋದಿ ಹಾಗೂ ಅಬ್ದೆಲ್ ಮತ್ತೆ ಭೇಟಿಯಾಗುತ್ತಿದ್ದಾರೆ. ಅಧ್ಯಕ್ಷ ಸೇರಿದಂತೆ ಈಜಿಪ್ಟ್ ಸರ್ಕಾರದ ಪ್ರಮುಖ ಗಣ್ಯರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ.