ಕಾರವಾರ : ಟ್ರಕ್‌ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 22ಕ್ಕೂ ಹೆಚ್ಚು ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕವಲಕ್ಕಿ ಘಟನೆ ನಡೆದಿದೆ. ಹಾವೇರಿಯಿಂದ ಭಟ್ಕಳಕ್ಕೆ ಜಾನುವಾರು ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಟ್ರಕ್‌ನಲ್ಲಿ ಜಾನುವಾರು ಸಾಗಿಸುತ್ತಿದ್ದ ಕಳ್ಳರನ್ನು ಬಂಧಿಸಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ಮೂಲದ ಇಸ್ಮಾಯಿಲ್ ಖಾದರ್ ಸಾಬ್, ಮಹಾರಾಷ್ಟ್ರದ ಭೂಷಣನಗರ ನಿವಾಸಿ ಸಂಕೇತ ಬಲಿದ್ ಬಂಧಿತ ಆರೋಪಿಗಳು.
ಇದನ್ನೂ ಓದಿ : ವಾಹನ ಕಳ್ಳರ ಬಂಧನ : ಲಕ್ಷಾಂತರ ಮೌಲ್ಯದ ವಾಹನ, ಚಿನ್ನಾಭರಣ ವಶ
ಆರೋಪಿಗಳು ಗೇರುಸೊಪ್ಪ ಮಾರ್ಗವಾಗಿ ಭಟ್ಕಳಕ್ಕೆ ಗೋವುಗಳನ್ನು ತರುತ್ತಿದ್ದರು. ಮಾಹಿತಿ ತಿಳಿದ ಪೊಲೀಸರು, ಹೊನ್ನಾವರದ ಕವಲಕ್ಕಿ ಬಳಿ ಟ್ರಕ್ ತಡೆದ ಪರಿಶೀಲನೆ ಮಾಡಿದ್ದಾರೆ. ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ 22ಕ್ಕೂ ಅಧಿಕ ಜಾನುವಾರುಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಕ್ರೀದ್ ಸಮೀಪಿಸುತ್ತಿರುವ ಹಿನ್ನೆಲೆ ಜಾನುವಾರು ಸಾಗಾಟ ಮಾಡಲಾಗುತ್ತಿದೆ. ಯಾವುದೇ ಅನುಮತಿಪತ್ರವಿಲ್ಲದೇ ಗೋವುಗಳನ್ನು ಸಾಗಾಟ ಮಾಡಲು ಯತ್ನಿಸಿದ್ದಾರೆ. ಜಿಲ್ಲೆಯಾದ್ಯಂತ ಗಡಿಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.