Sunday, October 6, 2024

ಕೊಲೆ, ಹಲ್ಲೆ, ದರ್ಪ : ರಾಜಧಾನಿಯಲ್ಲಿ ಹೆಚ್ಚಾಯ್ತು ಆಟೋ ಡ್ರೈವರ್ಸ್ ಹಾವಳಿ!

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಆಟೋ ಡ್ರೈವರ್ಸ್ ಹಾವಳಿ ಹೆಚ್ಚಾಗಿದೆ. ಕೊಲೆ, ಕೊಲೆ ಯತ್ನ, ಹಲ್ಲೆ, ದರ್ಪ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗುತ್ತಿದೆ. ಆ ಮೂಲಕ ಬೆಂಗಳೂರು ಪ್ರಯಾಣಿಕರಿಗೆ ಸೇಫ್ ಅಲ್ಲ ಅನ್ನೋದು ಮತ್ತೊಮ್ಮೆ ಸಾಭೀತಾಗಿದೆ.

ಹೌದು, ಕಳೆದ ಎರಡು ಮೂರು ತಿಂಗಳಲ್ಲಿ‌ ಬೆಂಗಳೂರಿನಲ್ಲಿ 5ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಒಂದಲ್ಲಾ ಒಂದು ಕೇಸ್ ನಲ್ಲಿ ಆಟೋ ಡ್ರೈವರ್ಸ್ ಭಾಗಿಯಾಗುತ್ತಿದ್ದಾರೆ. ಆಟೋ ಡ್ರೈವರ್ಸ್ ಹಾವಳಿ ಎಕ್ಸ್ ಕ್ಲೂಸಿವ್ ಕೇಸ್ ಡೀಟೆಲ್ಸ್ ಇಲ್ಲಿದೆ ನೋಡಿ.

ಪ್ರಕರಣ ನಂ.1

ಆಟೋ ಬಾಡಿಗೆ ವಿಚಾರಕ್ಕೆ ಜಗಳ, ಚಾಲಕನಿಂದ ಕೊಲೆ. ಇಬ್ಬರು ಪ್ರಯಾಣಿಕರ ಮೇಲೆ ಚಾಕುವಿನಿಂದ ಹಲ್ಲೆ. ಅಸ್ಸಾಂ ಮೂಲದ ಅಹ್ಮದ್ ಎಂಬಾತನ ಕೊಲೆ. ಆಟೋ ಚಾಲಕ ಅಶ್ವಥ್ ಎಂಬಾತನಿಂದ ಕೊಲೆ. ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಪ್ರಕರಣ ನಂ.2

ರ್ಯಾಪಿಡೋ ಬುಕ್ ಮಾಡಿದ್ದಕ್ಕೆ ಬೈಕ್ ಗೆ ಡಿಕ್ಕಿ. ರ್ಯಾಪಿಡೋ ಸವಾರನ ಮೇಲೆ ಹಲ್ಲೆಗೆ ಮುಂದಾಗಿದ್ದ ಆಟೋ ಚಾಲಕ. ಹೆಚ್.ಎಸ್.ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಪ್ರಕರಣ ನಂ.3

ಕನ್ನಡ ಬರಲ್ಲ ಎಂದಿದ್ದಕ್ಕೆ ದರ್ಪ ಮೆರೆದಿದ್ದ ಆಟೋ ಚಾಲಕ. ಕನ್ನಡ ಬರಲ್ಲ‌ ಅಂದ್ರೆ ಪಾಕಿಸ್ತಾನಕ್ಕೆ ಹೋಗು ಎಂದು ಅವಾಜ್. ಬೇರೆ ಭಾಷಿಯನೊಬ್ಬನಿಗೆ ಅವಾಜ್ ಹಾಕಿದ್ದ ಆಟೋ ಚಾಲಕ. ಆಟೋ ಚಾಲಕ ಅವಾಜ್ ಹಾಕ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ : ಓಲಾ ಉಬರ್ ಗೆ ಸೆಡ್ಡು ಹೊಡೆಯಲು ರೆಡಿಯಾದ ಆಟೋ ಡ್ರೈವರ್ಸ್

ಪ್ರಕರಣ ನಂ.4

ಸಂಚಾರಿ ಎಎಸ್ಐ ಬೈಕ್ ಗೆ ಡಿಕ್ಕಿ ಹೊಡೆದು ವಾಗ್ವಾದ. ಬೈಕ್ ಪಾರ್ಕ್ ಮಾಡಲು ನಿಂತಿದ್ದ ಎಎಸ್ಐ ಬೈಕ್ ಗೆ ಡಿಕ್ಕಿ ಹೊಡೆದಿದ್ದ ಆಟೋ ಚಾಲಕ. ಬೈಕ್ ಗೆ ಆಟೋ ಒಂದು ಕ್ಷಣ ಗುದ್ದಿದ್ದೇ ದಂಗಾಗಿದ್ದ ಎಎಸ್ಐ. ನಂತರ ಚಾಲಕನಿಗೆ ಕಪಾಳ ಮೋಕ್ಷ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಹಲಸೂರು ಗೇಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಪ್ರಕರಣ ನಂ.5

ಆಫ್ಲೈನ್ ಮಾಡಲ್ಲ ಎಂದಿದ್ದಕ್ಕೆ ಹಲ್ಲೆಗೆ ಯತ್ನ. ಪ್ರಯಾಣಿಕನ ತಾಯಿ ಮುಂದೆಯೇ ಹಲ್ಲೆಗೆ ಯತ್ನಸಿದ್ದ ಆಟೋ ಡ್ರೈವರ್. ಆನ್ಲೈನ್ ಬುಕಿಂಗ್ ಕ್ಯಾನ್ಸಲ್ ಮಾಡು ಎಂದು ಅವಾಜ್ ಹಾಕಿ ಬೆದರಿಕೆ. ಆಗಲ್ಲ ಎಂದಿದ್ದ ಪ್ರಯಾಣಿಕನ ಮೇಲೆ ಹಲ್ಲೆಗೆ ಯತ್ನಿಸಿ ಅವಾಜ್. ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್.

ಹೀಗೆ ಒಂದಲ್ಲ ಒಂದು ಕಿರಿಕ್ ತೆಗೆದು ಆಟೋ ಡ್ರೈವರ್ಸ್ ದರ್ಪ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಹಲವೆಡೆ ಕೆಲ ಆಟೋ ಡ್ರೈವರ್ ಗಳ ವರ್ತನೆ ಮಿತಿ ಮೀರಿದೆ. ಇದರಿಂದ ಬೇರೆ ಆಟೋ ಡ್ರೈವರ್ ಗಳಿಗೂ ಕೆಟ್ಟ ಹೆಸರು ಬರುತ್ತಿದೆ. ರಾಜಧಾನಿ ಮಂದಿ ಆಟೋ ಹತ್ತಲು ಹಿಂದೆ ಮುಂದೆ ನೋಡೋ ಪರಿಸ್ಥಿತಿ ಎದುರಾಗಿದೆ.

RELATED ARTICLES

Related Articles

TRENDING ARTICLES