Friday, November 1, 2024

ಒಬ್ಬ ಕಳ್ಳ, ಮತ್ತೊಬ್ಬ ಮಳ್ಳ.. ಇಂಥವರನ್ನು ಹಿಂದೆ ನೋಡಿರಲಿಲ್ಲ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಇಬ್ಬರೂ ಮೋಸಗಾರರು ಇದ್ದಾರೆ. ಒಬ್ಬ ಕಳ್ಳ, ಮತ್ತೊಬ್ಬ ಮಳ್ಳ ಎಂದು ಹೆಸರು ಹೇಳದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಜನಸಭಾ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಅವರು, ರಾಜ್ಯದ ಜನರಿಗೆ ಇವರಿಬ್ಬರು ಸುಳ್ಳು ಹೇಳಿದ್ದಾರೆ. ಇಂಥ ಕಳ್ಳರು, ಮಳ್ಳರನ್ನು ಹಿಂದೆ ನೋಡಿರಲಿಲ್ಲ ಎಂದು ಕುಟುಕಿದ್ದಾರೆ.

ಒಂದ್ಸಲಾ ಎಲ್ಲಾ ಮತದಾರರು ಮೋಸ ಹೋಗಿದ್ದಾರೆ. ಯುವ ನಿರುದ್ಯೋಗಿಗಳಿಗೆ ಸುಳ್ಳು ಭರವಸೆ ನೀಡಿದ್ದಾರೆ. ಮೊದಲ ಕ್ಯಾಬಿನೆಟ್ ನಲ್ಲಿ ಈ ವರ್ಷ ಪಾಸಾದವರಿಗೆ ಮಾತ್ರ ವಿದ್ಯಾನಿಧಿ ಅಂದ್ರು. ಹಿಂದೆ ಯಾಕೆ ಹೇಳಿರಲಿಲ್ಲ. ಬಾಯಿಗೆ ಮಣ್ಣು ಹಾಕಿಕೊಂಡಿದ್ರಾ? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಮೊನ್ನೆ ಕಾರ್ಯಕ್ರಮದಲ್ಲಿ ಡಿಕೆಶಿ ನಿಮಗೆ ಅಲ್ವಾ, ‘Dont Disturb’ ಅಂದಿದ್ದು : ಶಾಸಕ ಯತ್ನಾಳ್

ಅಕ್ಕಿ ಕೊಡಿ, ಇಲ್ಲ ಜನರ ಖಾತೆಗೆ ದುಡ್ಡು ಹಾಕಿ

10 ಕಿಲೋ ಅಕ್ಕಿ ಕೊಡ್ತೀನಿ ಅಂತ ಹೇಳಿದ್ರು. ಈಗ ಕೇಂದ್ರದತ್ತ ಬೊಟ್ಟು ಮಾಡ್ತಿದ್ದಾರೆ. ಈಗ ಕೊಡುತ್ತಿರುವ ಅಕ್ಕಿ ಪ್ರಧಾನಿ ಮೋದಿಯವರು ಅಂತ ಜನರಿಗೆ ಗೊತ್ತಾಗಿದೆ. ಅಕ್ಕಿ ಕೊಡಲು ಆಗದಿದ್ದರೆ ಜನರ ಖಾತೆಗೆ ದುಡ್ಡು ಹಾಕಲಿ. ಮೋಸ ಮಾಡಲು ಅಧಿಕಾರಕ್ಕೆ ಬಂದವರಿಗೆ ತಕ್ಕ ಉತ್ತರ ಕೊಡಬೇಕು. ಅಕ್ಕಿ ಕೊಡುತ್ತೇವೆ ಎಂದು ರಾಜ್ಯದ ಜನರಿಗೆ ಸುಳ್ಳು ಹೇಳಿದ್ದಾರೆ ಎಂದು ಗುಡುಗಿದ್ದಾರೆ.

ಮೋದಿಯವರಿಗೆ ಕೇಳಿ ಭರವಸೆ ನೀಡಿದ್ರಾ?

ಪ್ರಧಾನಿ ಮೋದಿಯವರು ಹೇಳಿದಂತೆ 5 ಕಿಲೋ ಅಕ್ಕಿ ಕೊಡುತ್ತಿದ್ದಾರೆ. ನೀವು ಹೇಳಿದ 10 ಕಿಲೋ ಅಕ್ಕಿ ಎಲ್ಲಿಂದ ತರ್ತಿರೋ ತನ್ನಿ. ರಾಜ್ಯದ ಜನರಿಗೆ ಭರವಸೆ ನೀಡಿದ ಹಾಗೆ 10 ಕಿಲೋ ಅಕ್ಕಿ ಕೊಡಿ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡುವ ಮೊದಲು ಮೋದಿಯವರಿಗೆ ಕೇಳಿ ಭರವಸೆ ನೀಡಿದ್ರಾ? ಈಗ ಎಲ್ಲಿಂದ ಕೊಡ್ತಿರೋ, ಕೊಡಿ ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES