Friday, November 22, 2024

ಕಾಂಗ್ರೆಸ್ ಸರ್ಕಾರ ‘ಮರಳಿ ದಂಧೆಗೆ’ ಇಳಿದಿದೆ : ಶಾಸಕ ಯತ್ನಾಳ್

ವಿಜಯಪುರ : ‘ಮರಳು ದಂಧೆ’ ಮಾತ್ರ ಆರಂಭವಾಗಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ‘ಮರಳಿ ದಂಧೆಗೆ’ ಇಳಿದಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.

ಮರಳು ದಂಧೆಗೆ ಪೊಲೀಸ್ ಪೇದೆ ಬಲಿ ಹಾಗೂ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಅವರು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಮಿಷದ ಮತಾಂತರಕ್ಕೆ ಬೆಂಬಲ ನೀಡಿದ್ದಾರೆ. ಹಿಂದೂ ಸಮಾಜದ ಪರಮ ಪೂಜ್ಯ ಮಠಾಧೀಶರು ಹಾಗೂ ಸಂತ ಸಮಾಜ ಸರ್ಕಾರದ ಈ ನಿಲುವಿನ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಹೇಳಿದ್ದಾರೆ.

ರಾಷ್ಟ್ರದ ಅಸ್ಮಿತೆ ಕಾಪಾಡಿಕೊಳ್ಳೋಣ

ಹಿಂದೂ ಸಮಾಜ ಒಗ್ಗಟ್ಟಾಗದೆ ಇದ್ದರೇ ನಮ್ಮ ಸಮಾಜದ ಬಂಧುಗಳನ್ನು ಮತಾಂತರಕ್ಕೆ ಒಳಪಡಿಸಬಹುದು. ಎಲ್ಲರನ್ನು ಗೌರವಯುತವಾಗಿ ನಡೆಸಿಕೊಳ್ಳೋಣ, ಹಿಂದುತ್ವ ಈ ರಾಷ್ಟ್ರದ ಅಸ್ಮಿತೆ ಅದನ್ನು ಕಾಪಾಡಿಕೊಳ್ಳೋಣ ಎಂದು ಶಾಸಕ ಯತ್ನಾಳ್ ತಿಳಿಸಿದ್ದಾರೆ.

ಇದನ್ನೂ ಓದಿ : ಈ ಕೆಲಸ ಮಾಡ್ರಿ ಅಂತ ಜನ ನಿಮಗೆ ವೋಟು ಹಾಕಿ ಗೆಲ್ಲಿಸಿದ್ರಾ? : ಬಿ.ವೈ ವಿಜಯೇಂದ್ರ

ಪೊಲೀಸರನ್ನು ಛೂ ಬಿಡುತ್ತೀರಾ?

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿದರೆ ಕೇಸ್ ದಾಖಲಿಸುತ್ತೀರಾ? ನಿಮ್ಮ ಪೊಳ್ಳು ಭರವಸೆಗಳನ್ನು ಪ್ರಶ್ನೆ ಮಾಡಿದರೆ ಬೆದರಿಸುತ್ತೀರಾ? ನಿಮ್ಮ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪುವಂತೆ ಮಾಡಿದರೆ ಪೊಲೀಸರನ್ನು ಛೂ ಬಿಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕೇಸ್ ಹಾಕಿ ನೋಡೋಣ. ಜೈಲಿಗೆ ಕಳುಹಿಸಿ ನೋಡೋಣ. ನಿಮ್ಮ ವೈಫಲ್ಯಗಳನ್ನು ಪ್ರತಿನಿತ್ಯ ಪ್ರಶ್ನೆ ಮಾಡುತ್ತೇವೆ. ಸಂವಿಧಾನ ನಿಮಗೆ ಮಾತ್ರವಲ್ಲ ನಮಗೂ ರಕ್ಷಣೆ ನೀಡಿದೆ ಎಂದು ಶಾಸಕ ಯತ್ನಾಳ್ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES