ಚಿಕ್ಕಮಗಳೂರು : ವಿವಿಧ ಸಮಾಜದ ಮಠಾಧೀಶರು ಮರು ಮತಾಂತರಕ್ಕೆ ಮುಂದಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕರೆ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು. ದೇಶ, ಹಿಂದೂ ಸಮಾಜ ಉಳಿಸಿಕೊಳ್ಳಲು ಅನಿವಾರ್ಯವಾಗಿ ಮಹಾಪಂಚಾಯಿತ್ ಕರೆಯಬೇಕು. ಮಠಾಧೀಶರು, ಸಮಾಜದ ಮುಖಂಡರು, ಜಗದ್ಗುರುಗಳು ಸನ್ಯಾಸಿಗಳ ಮಹಾಪಂಚಾಯತ್ ಕರೆಯಬೇಕು. ನಮ್ಮನ್ನು ನಾವು ಹಾಗೂ ದೇಶ ರಕ್ಷಣೆ ಮಾಡಿಕೊಳ್ಳಲು ಸ್ವರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಈ ಕೆಲಸ ಮಾಡ್ರಿ ಅಂತ ಜನ ನಿಮಗೆ ವೋಟು ಹಾಕಿ ಗೆಲ್ಲಿಸಿದ್ರಾ? : ಬಿ.ವೈ ವಿಜಯೇಂದ್ರ
ಬಲಾತ್ಕಾರದ ಮತಾಂತರದ ಪರ
ವಿವಿಧ ಸಮಾಜದ ಮಠಾಧೀಶರು ಮರು ಮತಾಂತರಕ್ಕೆ ಮುಂದಾಗಬೇಕು. ಬೇರೆ ಬೇರೆ ಕಾರಣಕ್ಕೆ ಹಿಂದೂ ಸಮಾಜದಿಂದ ದೂರ ಹೋದವರನ್ನ ಮರಳಿ ಕರೆತರಬೇಕು. ಹೇಗಿದ್ರು ಮತಾಂತರಕ್ಕೆ ಮುಕ್ತವಾದ ಅವಕಾಶವನ್ನು ನೀಡಿದೆ. ಹಿಂದೂ ಧರ್ಮಕ್ಕೆ ಮರು ಮತಾಂತರಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಬಲಾತ್ಕಾರದ ಮತಾಂತರದ ಪರವಾಗಿ ಕಾಂಗ್ರೆಸ್ ಇದೆಯಾ? ಆಸೆ, ಆಮಿಷ, ಬಲತ್ಕಾರ, ಮೋಸದ ಮತಾಂತರಕ್ಕೆ ನಿಷೇಧ ಇದೆ. ಬಲವಂತದ ಮತಾಂತರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು? ಎಂದು ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ.