Saturday, November 23, 2024

ಕಾಮಗಾರಿ ನಡೆಸದೇ 118 ಕೋಟಿ ರೂ. ಬಿಲ್ ಸೃಷ್ಟಿ: ಸಸ್ಪೆಡ್​ ​ಆಗಿರುವ 11 ಅಧಿಕಾರಿಗಳು ಯಾರು ಗೊತ್ತಾ..?

ಬೆಂಗಳೂರು: ಯಾವುದೇ ಕಾಮಕಾರಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ನಡೆಸದೇ ಕೋಟ್ಯಾಂತರ ರೂಪಾಯಿ ನಕಲಿ ಬಿಲ್​ ಸೃಷ್ಟಿಸಿದ ಆರೋಪದ ಮೇಲೆ 11 ಬಿಬಿಎಂಪಿ(BBMP) ಅಧಿಕಾರಿಗಳನ್ನು ಸಸ್ಪೆಡ್​ ಮಾಡಲಾಗಿದೆ.

ಹೌದು, 2019 -20ರಲ್ಲಿ ಕಳಪೆ ಕಾಮಗಾರಿ ಸಂಬಂಧ ಲೋಕಾಯುಕ್ತಕ್ಕೆ ಕಾಂಗ್ರೆಸ್​ ಸಂಸದ ಡಿ.ಕೆ.ಸುರೇಶ್(DK Suresh) ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ 9 ಬಿಬಿಎಂಪಿ ಇಂಜಿನಿಯರ್​, ಓರ್ವ ಅಧೀಕ್ಷಕ, ಓರ್ವ ಉಪ ನಿರ್ದೇಶಕ ಸೇರಿದಂತೆ ಒಟ್ಟು 11 ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ತಾಕತ್ತು ಇದ್ರೆ ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನ ಜಾರಿ ಮಾಡ್ಲಿ ; ಆರ್. ಅಶೋಕ್

ಅಲ್ಲದೇ ಹಗರಣದ ತನಿಖೆಗಾಗಿ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದೆ.

ಸಸ್ಪೆಡ್ ಆದ ಅಧಿಕಾರಿಗಳು ಇವರೇ ನೋಡಿ 

  1. ದೊಡ್ಡಯ್ಯ- ಮುಖ್ಯ ಇಂಜಿನಿಯರ್ ಟಿವಿಸಿಸಿ ವಿಭಾಗ
  2. ಸತೀಶ್- ಸಹಾಯಕ ಕಾರ್ಯಪಾಲಕ ಇಂಜಿನಿಯರ್​, ಟಿವಿಸಿಸಿ ವಿಭಾಗ
  3. ವಿಜಯ್ ಕುಮಾರ್- ಮುಖ್ಯ ಇಂಜಿನಿಯರ್ ಆರ್​ಆರ್​ ನಗರ ವಲಯ
  4. ಶಿಲ್ಪಾ- ಸಹಾಯಕ ಇಂಜಿನಿಯರ್ ಆರ್​ಆರ್​ ವಲಯ
  5. ಮೋಹನ್- ಮುಖ್ಯ ಇಂಜಿನಿಯರ್ ಯೋಜನಾ ವಿಭಾಗ ಆರ್​ಆರ್ ವಲಯ
  6. ಭಾರತಿ- ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ ಆರ್​ಆರ್ ವಲಯ
  7. ಬಸವರಾಜ್- ಕಾರ್ಯಪಾಲಕ ಇಂಜಿನಿಯರ್ ಆರ್​ಆರ್​ ನಗರ ವಲಯ
  8. ಸಿದ್ದಯ್ಯ-ಸಹಾಯಕ ಇಂಜಿನಿಯರ್ ವಾರ್ಡ್​ ನಂ-129 ಮತ್ತು 160
  9. ಉಮೇಶ್​ -ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಗ್ಗೆರೆ
  10. ಅನಿತಾ- ಸೂಪರಿಡೆಂಟ್, ಕ್ಯಾರಿಯರ್ ಆರ್​ಆರ್​ ನಗರ ವಲಯ
  11. ಗೂಳಿಗೌಡ-ಡೆಪ್ಯುಟಿ ಮ್ಯಾನೇರ್ ಆರ್​ಆರ್​ ನಗರ ವಲಯ

 

RELATED ARTICLES

Related Articles

TRENDING ARTICLES