Friday, November 22, 2024

‘ಸ್ತ್ರೀಗೆ ಶಕ್ತಿ ತುಂಬಲು ಶಕ್ತಿ ಯೋಜನೆ’ ಅಂತಾ ಹೆಸರು ಇಟ್ಟಿದ್ದೇವೆ : ಸಿದ್ದರಾಮಯ್ಯ

ಬೆಂಗಳೂರು : ಶಕ್ತಿ ಯೋಜನೆ ಹೆಸರು ಇಟ್ಟಿದ್ದು ಯಾಕೆ ಅಂದ್ರೆ, ಹೆಣ್ಣುಮಕ್ಕಳಿಗೆ ಶಕ್ತಿ ತುಂಬಲು. ಮಹಿಳೆಯರಿಗೆ ಶಕ್ತಿ ತುಂಬಿದಾಗ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧ ಮುಂಭಾಗ ಹಮ್ಮಿಕೊಂಡಿದ್ದ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್​​​​ ಕಾರ್ಡ್​​ ಮಾದರಿ ಅನಾವರಣಗೊಳಿಸಿ ಅವರು ಮಾತನಾಡಿದರು.

ನಾವು ಐದು ಗ್ಯಾರಂಟಿ ಕೊಟ್ಟಿದ್ದೇವೆ. ಅದರಲ್ಲಿ 4 ಗ್ಯಾರಂಟಿ ಮಹಿಳೆಯರಿಗೆ ಸಂಬಂಧಪಟ್ಟಿವೆ. ಇದಕ್ಕೆ ವಿರೋಧ ಪಕ್ಷದವರು ಗೇಲಿ ಮಾಡುತ್ತಾರೆ. ಯಾರು ಗೇಲಿ ಮಾಡ್ತಾರೋ ಅವರು ಅಲ್ಲಿಯೇ ಇರ್ತಾರೆ. ನಾವು ಯಾವುದಕ್ಕೂ ತೆಲೆಕೆಡಿಸಿಕೊಳ್ಳುವುದಿಲ್ಲ, ಯಾವುದಕ್ಕೂ ಸೊಪ್ಪು ಹಾಕಲ್ಲ. ಅವರೆಲ್ಲಾ ಕೆಲಸವಿಲ್ಲದೆ ಸುಮ್ಮನೆ ಗೇಲಿ ಮಾಡ್ತಾರೆ ಎಂದು ಕುಟುಕಿದರು.

ಇದನ್ನೂ ಓದಿ : ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಲಿ, ಕಾಂಗ್ರೆಸ್ ಗ್ಯಾರಂಟಿ ಖಚಿತ : ದಿನೇಶ್ ಗುಂಡೂರಾವ್

ಸಂತೋಷದಿಂದ ಉದ್ಘಾಟಿಸಿದ್ದೇನೆ

ಶಕ್ತಿ ಯೋಜನೆಯನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇವೆ. ಶಕ್ತಿ ಯೋಜನೆ ಮಹಿಳೆಯರಿಗಾಗಿ ಮಾಡಿರುವ ಕಾರ್ಯಕ್ರಮ. ಮಹಿಳೆಯರು ಸಮಾಜದಲ್ಲಿ ಶೇ.50ರಷ್ಟು ಇದ್ದಾರೆ. ಶತಮಾನಗಳಿಂದ ಅವಕಾಶಗಳಿಂದ ವಂಚಿತರಾಗಿದ್ದಾರೆ. ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಶತಮಾನಗಳಿಂದ ಅವಕಾಶದಿಂದ ವಂಚಿತರಾಗಿದ್ದಾರೆ. ಯಾವುದೇ ಸಮಾಜ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಎಂದರೆ ಎಲ್ಲ ಕ್ಷೇತ್ರಗಳಲ್ಲಿ ಪುರುಷರಂತೆ ಮಹಿಳೆಯರು ಭಾಗಿಯಾಗಬೇಕು ಎಂದು ಹೇಳಿದರು.

ಎಡಬಿಡಂಗಿ ಹೇಳಿಕೆ ಕೊಡ್ತಾರೆ

ಜುಲೈ 1ರಿಂದ ಗೃಹಜ್ಯೋತಿ ಜಾರಿಗೆ ತರುತ್ತಿದ್ದೇವೆ. ವಿರೋಧ ಪಕ್ಷದವರು ಒಂದು ರೀತಿ ಎಡಬಿಡಂಗಿ ಮಾತುಗಳನ್ನು ಆಡುತ್ತಾರೆ. ಒಂದು ವರ್ಷದಿಂದ 70 ಯುನಿಟ್ ಬಳಸಿದ್ರೆ, ಅವರಿಗೂ 200 ಯುನಿಟ್ ಕೊಡಿ ಅಂತಾರೆ. ಸರ್ಕಾರದ ಬಗ್ಗೆ ಅವರಿಗೆ ಕಾಳಜಿ ಇದ್ಯಾ? ವಿರೋಧ ಪಕ್ಷದವರು ಆಡುವ ಮಾತುಗಳಿಗೆ ಜನ ಮರುಳಾಗಲ್ಲ. ಕೆಲವು ಮಾಧ್ಯಮಗಳೂ ಅವರೊಂದಿಗೆ ಸೇರಿಕೊಳ್ತಿವಿ ಎಂದು ಛೇಡಿಸಿದರು.

RELATED ARTICLES

Related Articles

TRENDING ARTICLES