ಬೆಂಗಳೂರು : ಭಾರತ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್ ಗೆ ಆಲೌಟ್ ಆಗಿದೆ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆಯಿತು.
ಮೊದಲ ದಿನ ಪ್ರಾಬಲ್ಯ ಮೆರೆದಿದ್ದ ಆಸಿಸ್ ಬ್ಯಾಟರ್ ಗಳು ಎರಡನೇ ದಿನವಾದ ಇಂದೂ ಸಹ ಬೊಂಬಾಟ್ ಪ್ರದರ್ಶನ ನೀಡಿದರು. ಆದರೆ, ದಿನದ ಕೊನೆಯಲ್ಲಿ ಟೀಂ ಇಂಡಿಯಾ ಬೌಲರ್ ಗಳು ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Innings Break!
Australia post 469 in the first innings of the #WTC23 Final.
4️⃣ wickets for @mdsirajofficial
2️⃣ wickets each for @MdShami11 & @imShard
1️⃣ wicket for @imjadejaScorecard ▶️ https://t.co/0nYl21pwaw#TeamIndia pic.twitter.com/1zvffFhgST
— BCCI (@BCCI) June 8, 2023
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 163, ಸ್ವೀವ್ ಸ್ಮಿತ್ 121, ವಾರ್ನರ್ 43, ಅಲೆಕ್ಸ್ ಕ್ಯಾರಿ 48 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಸಿರಾಜ್ 4, ಮೊಹಮ್ಮದ್ ಶಮಿ ಹಾಗೂ ಶಾರ್ದುಲ್ ತಲಾ ಎರಡು ವಿಕೆಟ್, ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದು ಮಿಮಚಿದರು.