ಬೆಂಗಳೂರು : ಜ್ಯೇಷ್ಠ ಮಾಸದಲ್ಲಿ ಬರುವ ಚತುರ್ಥಿ ತಿಥಿಯನ್ನು ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಇಂದು (ಜೂನ್ 7) ಕೃಷ್ಣ ಪಿಂಗಳ ಗಣೇಶ ಚತುರ್ಥಿ ಬಂದಿರುವುದು ಹಾಗೂ ಬುಧ ಸಂಕ್ರಮಣ ಇರುವುದರಿಂದ ಶ್ರೀ ಗಣೇಶನ ಭಕ್ತರಿಗೆ ಹಾಗೂ ಸಾಧಕರಿಗೆ ಸಂತಸದ ದಿನ.
ಶ್ರೀ ಕೃಷ್ಣ ಪಿಂಗಳ ಗಣೇಶ ಮತ್ತು ಬುಧ ಸಂಕ್ರಾಂತಿ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯರು ತಮ್ಮ ಕುಟುಂಬದ (ಪತಿ, ಮಕ್ಕಳ) ಯೋಗಕ್ಷೇಮ, ದೀರ್ಘಾಯುಷ್ಯಕ್ಕಾಗಿ ಈ ಉಪವಾಸವನ್ನು ಆಚರಿಸುತ್ತಾರೆ. ಪ್ರತಿ ತಿಂಗಳು ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎನ್ನಲಾಗುತ್ತದೆ. ಸನಾತನ ಧರ್ಮದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.
ಪೂಜೆ ವೇಳೆ ನೈವೇದ್ಯಕ್ಕೆ ಏನು ಇಡಬೇಕು?
ಪೂಜೆಗೆ ಯಾವ ವಸ್ತ್ರವನ್ನು ಧರಿಸಿದರೆ ಉತ್ತಮ
ಯಾವ ರಾಶಿಯವರಿಗೆ ಶುಭ ಫಲ?
ನಾಡಿನೆಲ್ಲಡೆ ಶಾಂತಿ–ಪ್ರೇಮ ಹರಡಲಿ
12 ರಾಶಿಗಳಿಗೂ ಶುಭ ಲಾಭಗಳನ್ನು ಶ್ರೀ ಗಣೇಶನು ಅನುಗ್ರಹಿಸಲಿ. ರೈತಾಪಿ ವರ್ಗದವರಿಗೆ ಗಣೇಶನ ಅನುಗ್ರಹದಿಂದ ಉತ್ತಮ ಮಳೆ-ಬೆಳೆಯಾಗಲಿ. ನಾಡಿನೆಲ್ಲಡೆ ಶಾಂತಿ-ಪ್ರೇಮಗಳು ಹರಡಲಿ. ಇಡೀ ವಿಶ್ವಕ್ಕೆ ಮಂಗಳವನ್ನು ಶ್ರೀ ಗಣೇಶನು ಅನುಗ್ರಹಿಸಲಿ ಎಂದು ಶುಭ ಆಶೀರ್ವಾದ ಮಾಡುತ್ತೇನೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.