ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣ ಸಂಬಂಧ ಸಾರಿಗೆ ನಿಗಮಗಳು ಮಹಿಳೆಯರಿಗೆ ನೀಡಲು ಫ್ರೀ ಟಿಕೆಟ್ ರೆಡಿ ಮಾಡುತ್ತಿದ್ದಾರೆ.
ಹೌದು, ಜೂನ್ 11ರಿಂದ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾಗಲಿದೆ. ಹೀಗಾಗಿ, ಬಸ್ ನಲ್ಲಿ ಕಂಡಕ್ಟರ್ ಗಳು ಟಿಕೆಟ್ ಕೊಡುತ್ತಾರಾ? ಇಲ್ಲವಾ? ಎಂಬ ಪ್ರಶ್ನೆಯೂ ಮೂಡಿತ್ತು. ಇದೀಗ, ಬೆಂಗಳೂರಿನಲ್ಲಿ ಬಿಎಂಟಿಸಿ ಉಚಿತ ಪ್ರಯಾಣಕ್ಕೂ ಟಿಕೆಟ್ ನೀಡಲಿದೆ.
ಈಗಾಗಲೇ ಮಾದರಿ ಟಿಕೆಟ್ ಕೂಡ ಸಿದ್ಧ ಪಡಿಸಿದ್ದು, ಫೋಟೋ ವೈರಲ್ ಆಗಿದೆ. ಇದರಲ್ಲಿ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ? ಎನ್ನುವ ಮಾಹಿತಿ ಮಾತ್ರ ಇದೆ. ಎಷ್ಟು ಹಣ ಪಾವತಿಸಿದ್ದಾರೆ ಎನ್ನುವ ಮಾಹಿತಿ ಕೊಟ್ಟಿಲ್ಲ.
ಮಹಿಳೆಯರು ಪ್ರತಿನಿತ್ಯ ಎಷ್ಟು ಜನ ಓಡಾಟ ನಡೆಸುತ್ತಾರೆ ಎಂಬ ಲೆಕ್ಕಾ ಪಡೆಯಲು ಟಿಕೆಟ್ ವ್ಯವಸ್ಥೆಯ ಮೊರೆ ಹೋಗಿದ್ದಾರೆ. ಟಿಕೆಟ್ ನಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿಯೋಜನೆ ಎಂದು ನಮೂದಿಸಲಾಗಿದೆ. ಬಳಿಕ, ಎಲ್ಲಿಂದ ಎಲ್ಲಿಗೆ ಪ್ರಯಾಣ ಎಂಬ ಮಾಹಿತಿ, ಹಣವನ್ನು ಹಾಕುವ ಜಾಗದಲ್ಲಿ ನಿಲ್ ಅಂತ ಹಾಕಲಾಗಿದೆ.
ಇದನ್ನೂ ಓದಿ : ನನಗೆ ಹೆಣ್ಣುಮಕ್ಕಳು ಮೇಲೆ ಮಾತ್ರ ನಂಬಿಕೆ : ಡಿ.ಕೆ ಶಿವಕುಮಾರ್
ಜೂ.11ರಿಂದ ಶಕ್ತಿ ಯೋಜನೆ ಜಾರಿ
ರಾಜ್ಯದ ಎಲ್ಲಾ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಒಳಗೊಂಡಂತೆ ಎಸಿ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣ (ರಾಜ್ಯದೊಳಗೆ ಮಾತ್ರ)ಕ್ಕೆ ಅವಕಾಶ ಕಲ್ಪಿಸಲಾಗುವುದು.
ಜೂನ್ 11 ರಂದು ‘ಶಕ್ತಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ಶೇ. 94 ರಷ್ಟು ಮಹಿಳೆಯರು ಯೋಜನೆಯ ಲಾಭ ಪಡೆಯಲಿದ್ದಾರೆ. ಬಸ್ ಗಳಲ್ಲಿ ಪುರುಷರಿಗೆ ಶೇ.50 ರಷ್ಟು ಆಸನ (ಸೀಟು) ಮೀಸಲಿಡಲಾಗುತ್ತದೆ. ಬಿಎಂಟಿಸಿಯಲ್ಲಿ ಆಸನ ಮೀಸಲು ಇರುವುದಿಲ್ಲ.