Thursday, December 19, 2024

ನನಗೆ ಹೆಣ್ಣುಮಕ್ಕಳು ಮೇಲೆ ಮಾತ್ರ ನಂಬಿಕೆ : ಡಿ.ಕೆ ಶಿವಕುಮಾರ್

ರಾಮನಗರ : ನನಗೆ ಹೆಣ್ಣುಮಕ್ಕಳು ಮೇಲೆ ಮಾತ್ರ ನಂಬಿಕೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರಾಮನಗರ ಜಿಲ್ಲೆ ಕನಕಪುರದ ದೊಡ್ಡಾಲನಹಳ್ಳಿಯಲ್ಲಿ ಮಾತನಾಡಿರುವ ಅವರು, ಮುಂದಿನ ಎಲ್ಲಾ ಸ್ಕೀಂಗಳನ್ನು (ಯೋಜನೆ) ಹೆಣ್ಣುಮಕ್ಕಳಿಗೆ ಕೊಡ್ತೀವಿ. ಯಾಕೆಂದರೆ, ಗಂಡುಮಕ್ಕಳು ಏನೇ ಮಾಡಿದ್ರು, ಮನೆಯಲ್ಲಿ ಸಹಿಸಿಕೊಳ್ಳೊದು ಹೆಣ್ಣುಮಕ್ಕಳು. ಹಾಗಾಗಿ, ಅವರ ಮೇಲೆ ನನಗೆ ನಂಬಿಕೆ ಜಾಸ್ತಿ ಎಂದು ತಿಳಿಸಿದ್ದಾರೆ.

ಸುಮ್ಮನೆ ಕೂತು ಸೋಂಬೇರಿ ಆಗಬೇಡಿ

ಆಗಸ್ಟ್ 15ಕ್ಕೆ 2 ಸಾವಿರ ರೂಪಾಯಿ ಕಳುಹಿಸಿ ಕೊಡ್ತೀನಿ. ಮುಂದಿನ ತಿಂಗಳಿಂದ 5 ಕಿಲೋ ಅಕ್ಕಿ ಕೊಡ್ತೀನಿ. ಜೂನ್ 11ರಿಂದ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಇರುತ್ತೆ. ವಿದ್ಯಾರ್ಥಿಗಳಿಗೆ ವಿಧ್ಯಾನಿಧಿ ಯೋಜನೆಯಡಿ 3 ಸಾವಿರ ರೂಪಾಯಿ ಕೊಡ್ತೀವಿ. ಎರಡು ವರ್ಷದಲ್ಲಿ ಕೆಲಸ ಹುಡುಕಿಕೊಳ್ಳಿ. ಸುಮ್ಮನೆ ಕೂತು ಸೋಂಬೇರಿ ಆಗಬೇಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ನನ್ನ ಹೆಂಡತಿಗೂ ಬಸ್ ಪ್ರಯಾಣ ಉಚಿತ : ಸಿಎಂ ಸಿದ್ದರಾಮಯ್ಯ

ತಿಂಗಳು ನೀವೆ ಬಿಲ್ ಕಟ್ಟಬೇಕು

ರಾಜ್ಯದ ಜನರಿಗೆ ಐದು ಉಚಿತ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ನಿಮ್ಮ ಮನೆಗಳು ಉಜ್ವಲವಾಗಿ ಬೆಳಗಬೇಕು. ಅದಕ್ಕಾಗಿ ಗೃಹಜ್ಯೋತಿ ಯೋಜನೆ ನೀಡಿದ್ದೀವೆ. ಈ ತಿಂಗಳು ನೀವೆ ಬಿಲ್ ಕಟ್ಟಬೇಕು. ಮುಂದಿನ ತಿಂಗಳು ನೀವು ಕರೆಂಟ್ ಕಟ್ಟಂಗಿಲ್ಲ. ಅಂಗಂತಾ ಬೆಕಾಬಿಟ್ಟಿ ಉಪಯೋಗಿಸುವ ಹಾಗಿಲ್ಲ. ನೀವು ಉಪಯೋಗಿಸುವ ಸರಾಸರಿ ನೋಡಿ ಉಚಿತ ಕೊಡ್ತೀವಿ. ಕಮರ್ಷಿಯಲ್ ಎಲ್ಲ ಕರೆಂಟ್ ಬಿಲ್ ಕಟ್ಟಬೇಕು ಎಂದು ಹೇಳಿದ್ದಾರೆ.

ಲಂಚ ಕೇಳಿದ್ರೆ ನನಗೆ ಪತ್ರ ಹಾಕಿ

ಗೃಹಲಕ್ಷ್ಮಿ ಯೋಜನೆ ಮೂಲಕ 2 ಸಾವಿರ ದುಡ್ಡು ಬರುತ್ತೆ. ಯಜಮಾನಿ ಯಾರು ಅಂತ ತೀರ್ಮಾನ ಮಾಡ್ಕೊಳಿ. ಎಲ್ಲರೂ ಅರ್ಜಿ ಹಾಕೊಳ್ಳಿ. ಯಾರೂ ಒಂದು ರೂಪಾಯಿ ಲಂಚ ಕೊಡಬೇಡಿ. ಲಂಚ ಕೇಳಿದ್ರೆ ನನಗೆ ಪತ್ರ ಹಾಕಿ ಎಂದು ಡಿ.ಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES