ಬೆಂಗಳೂರು : 400 ರೂ. ಗ್ಯಾಸ್ಗೆ 1,200 ರೂಪಾಯಿ ಕೊಡ್ತಾ ಇದ್ದೀವಿ, ಅದಕ್ಕೆ ಮೊದಲು ಬಿಜೆಪಿಯವರು ಉತ್ತರ ಕೊಡಲಿ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉಚಿತ ವಿದ್ಯುತ್ ಬಗ್ಗೆ ಸಭೆ ಮಾಡಿ ಡೀಟೇಲ್ಸ್ ತೆಗೆದುಕೊಂಡಿದ್ದೇನೆ. ಇಂದು ಸಿಎಂ ಸಭೆ ಮಾಡ್ತಾ ಇದ್ದಾರೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಿದೆ. ಐದು ಉಚಿತ ಗ್ಯಾರಂಟಿಗಳಿಗೆ ಕ್ಯಾಬಿನೆಟ್ನಲ್ಲೇ ಒಪ್ಪಿಗೆ ಸಿಕ್ಕಿದೆ, ಅದನ್ನು ಜಾರಿಗೆ ಕೊಡ್ತೀವಿ. ಬಿಜೆಪಿಯವರು ಎಲ್ಲಾ ಭರವಸೆ ಈಡೇರಿಸಿದ್ದಾರೆಯೇ? ಎಂದು ಸಚಿವ ಕೆ.ಜೆ.ಜಾರ್ಜ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಖಾಸಗಿ ಬಸ್ ಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ : ಶಾಸಕ ಸುನಿಲ್ ಕುಮಾರ್
2018ರಲ್ಲಿ ಬಿಜೆಪಿಯವರು ಯಾವುದು? ಯಾವುದು? ಈಡೇರಿಸಿದ್ದಾರೆ. 15 ಲಕ್ಷ ಹಣ ಅಕೌಂಟ್ಗೆ ಹಾಕ್ತೀವಿ ಅಂದ್ರು, ಕೊಟ್ಟಿದ್ದಾರಾ? ಉಜ್ವಲ ಸ್ಕೀಂನಲ್ಲಿ ಗ್ಯಾಸ್ ಉಚಿತವಾಗಿ ಕೊಡ್ತೀವಿ ಅಂದ್ರು. ಕೊಟ್ಟಿದ್ದಾರಾ? 400 ರೂ. ಗ್ಯಾಸ್ಗೆ 1,200 ರೂ. ಕೊಡ್ತಾ ಇದ್ದೀವಿ ಅದಕ್ಕೆ ಮೊದಲು ಉತ್ತರ ಕೊಡಲಿ ಎಂದು ಅವರು ಛೇಡಿಸಿದ್ದಾರೆ.
ಕೇಂದ್ರ ಸರ್ಕಾರ ಅವರದ್ದೇ ಅಲ್ವಾ? ಏನು ಈಡೇರಿಸಿದ್ದಾರೆ. ಎಲ್ಲವನ್ನೂ ಮಾಡೋದು ನಮಗೆ ಇಚ್ಛೆ ಇದೆ. ನಾವು ಕೊಟ್ಟ ಭರವಸೆ ಇದು. ಹಾಗಾಗಿ, ನಾವು ಈಡೇರಿಸುತ್ತೇವೆ. ಇದು ಬಿಜೆಪಿ ಕೊಟ್ಟ ಕಾರ್ಯಕ್ರಮ ಅಲ್ಲ. ಷರತ್ತು ಅನ್ವಯ ಮಾಡೋ ಬಗ್ಗೆ ನಾನು ಹೇಳೋಕೆ ಆಗಲ್ಲ. ನನ್ನ ಅಭಿಪ್ರಾಯ ಕ್ಯಾಬಿನೆಟ್ ನಲ್ಲಿ ತಿಳಿಸುತ್ತೇನೆ ಎಂದು ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದ್ದಾರೆ.