Monday, November 18, 2024

ಸಿಡಿಲು ಬಡಿದು ಯುವ ರೈತ, ಮಹಿಳೆ ಸಾವು

ಬೆಂಗಳೂರು : ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

ಅಥಣಿ ತಾಲೂಕಿನ ಕಕಮರಿ ಹಾಗೂ ದೆಸರಹಟ್ಟಿ ಗ್ರಾಮಗಳಲ್ಲಿ ಪ್ರತ್ಯೇಕ ಘಟನೆ ಸಂಭವಿಸಿದೆ. ದೇಸರಹಟ್ಟಿ ಗ್ರಾಮದ‌ ಜಮೀನಿನಲ್ಲಿ ಸಿಡಿಲು ಬಡಿದಿದ್ದರಿಂದ ರೈತ ಅಮುಲ್ ಜಯಸಿಂಗ್ (24) ಸಾವನ್ನಪ್ಪಿದ್ದಾನೆ. ಕಕಮರಿ ಗ್ರಾಮದ ಜಮೀನಿನಲ್ಲಿ ವಿಟ್ಟಾಬಾಯಿ ಕಾಮಕರ (50)ಎಂಬಾಕೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಹಲವೆಡೆ ವರುಣನ ಆರ್ಭಟ ಮುಂದುವರೆದಿದೆ. ಅದೇ ರೀತಿ ಇದೀಗ ರಾಜ್ಯ ರಾಜಧಾನಿ, ಸಿಲಿಕಾನ್‌ ಸಿಟಿ ಬೆಂಗಳೂರಿನ ಶಾಂತಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಆರಂಭವಾಗಿದೆ. ಇದರಿಂದ ಜನ ಸಾಮಾನ್ಯರು ಮತ್ತು ವಾಹನ ಸವಾರರು ಪರದಾಡುವಂತೆ ಮಾಡಿದೆ.

ಇದನ್ನೂ ಓದಿ : ಸಿಡಿಲು ಬಡಿದು ಯುವಕ, ಮಹಿಳೆ ಸಾವು

ಮರ ಬಿದ್ದು ಆಟೋ ಜಖಂ ಆಗಿದೆ

ಮೆಜೆಸ್ಟಿಕ್‌, ಕೋರಮಂಗಲ, ಶೇಶಾದ್ರಿಪುರ, ಯಶವಂತಪುರ, ಹೆಬ್ಬಾಳ, ಆರ್‌.ಟಿ.ನಗರ, ಎಂಜಿ ರಸ್ತೆ, ಶಿವಾಜಿನಗರ, ಕೆ.ಆರ್. ಸರ್ಕಲ್, ವಿಧಾನಸೌಧ, ಕೆ.ಆರ್.ಮಾರುಕಟ್ಟೆ, ಶಾಂತಿನಗರ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಇನ್ನು ಕಮಲನಗರದ ವಾಟರ್ ಟ್ಯಾಂಕ್ ಬಳಿ ಬೃಹತ್ ಮರ ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಆಟೋ ಜಖಂ ಆಗಿದೆ.

4 ಮೇಕೆ ಸಾವು, ಮೂವರಿಗೆ ಗಾಯ

ರೇಷ್ಮೆನಾಡು ರಾಮನಗರ ವರುಣನ ಅಬ್ಬರ ಜೋರಾಗಿದೆ. ಸಿಡಿಲು ಬಡಿದು 4 ಮೇಕೆ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿರುವ ಘಟನೆ ತಾಲೂಕಿನ ಅಣ್ಣಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂಜೆ ಕುರಿ ಮೇಯಿಸಿಕೊಂಡು ವಾಪಸ್ಸ್ ಬರುವಾಗ ಕುರಿಗಾಹಿಗಳು ಮಳೆಯಲ್ಲಿ ಸಿಲುಕಿದ್ದಾರೆ.

ಸಿಡಿಲಿನ ಅಬ್ಬರಕ್ಕೆ ನಾಲ್ಕು ಮೇಕೆ ಸ್ಥಳದಲ್ಲೇ ಸಾವನ್ನಪ್ಪಿವೆ. ಕುರಿಗಾಹಿಗಳಾದ ಲಿಂಗಯ್ಯ, ನರಸಿಂಹಯ್ಯ, ನಾಗೇಂದ್ರಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES