ಬೆಂಗಳೂರು: ಕಾಂಗ್ರೆಸ್ ಬಹುಮತ ಬಂದು ಈಗಲೇ ಸರ್ಕಾರ ರಚನೆಯಾಗಿದೆ. ಇನ್ನೂ ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ನಲ್ಲಿ ಸಿಎಂ, ಡಿಸಿಎಂ ಆಯ್ಕೆ ಪೈನಲ್ ಆಗಿದೆ. ಆದರೆ ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎಂಬುದು ಅಂತಿಮವಾಗಿಲ್ಲ.
ಹೌದು, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡುವುದೋ ಅಥವಾ ರಫ್ ಆ್ಯಂಡ್ ಟಫ್ ಶಾಸಕ ಯತ್ನಾಳ್ ಅವರನ್ನು ಈ ಸ್ಥಾನಕ್ಕೆ ಕೂರಿಸುವುದೋ ಎಂಬ ಚರ್ಚೆ ಜೋರಾಗಿದೆ.
ಇದನ್ನೂ ಓದಿ: ಇದು ರಿವರ್ಸ್ ಗೇರ್ ಸರ್ಕಾರ ; ಬಸವರಾಜ ಬೊಮ್ಮಾಯಿ
ಬಿಜೆಪಿ ತತ್ವ ಸಿದ್ದಾಂತಕ್ಕೆ ಸರಿ ಹೊಂದುವ ಯತ್ನಾಳ್ ವಿಪಕ್ಷ ನಾಯಕ ಆಗಬೇಕು ಎನ್ನುವುದು ಕಾರ್ಯಕರ್ತರ ಇಚ್ಛೆಯಾಗಿದೆ. ಈ ಮಧ್ಯೆ ಯತ್ನಾಳ್ ದೆಹಲಿಗೆ ಹೋಗಿದ್ದಾರೆ.. ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಯತ್ನಾಳ್ ದೆಹಲಿಗೆ ಹೋಗಿದ್ದು, ಕುತೂಹಲ ಮೂಡಿಸಿದೆ. ವಿಪಕ್ಷ ನಾಯಕ ಯಾರಾಗ್ತಾರೆ ಎಂಬುದು ಭಾರೀ ಕುತೂಹಲ ಮೂಡಿಸಿದ್ದು, ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.