Friday, November 22, 2024

2,000 ರೂ ಮರಳಿಸಲು ಬ್ಯಾಂಕ್​ನಲ್ಲಿ ಪ್ಯಾನ್ ನಂಬರ್ ಕೊಡಲೇ ಬೇಕಾ..?

ಬೆಂಗಳೂರು:  2,000 ರೂ ಮುಖಬೆಲೆಯ ನೋಟುಗಳನ್ನು ನಾವು ಬ್ಯಾಂಕಿಗೆ ಹಿಂದುರುಗಿಸಲು ಯಾವ ಡೀಟೇಲ್ಸ್​ ನಮ್ಮ ಬಳಿ ಇರಬೇಕು. ಎಂಬ ಗೊಂದಲವಿರುವುದು ಸಹಜ. ಆಗಿದ್ರೆ ಇತ್ತೀಚಿನ ಸುದ್ದಿ ಪ್ರಕಾರ ಎರಡು ಸಾವಿರ ನೋಟುಗಳನ್ನು ಹಿಂದಿರುಗಿಸಲು ನಮಗೆ ಬ್ಯಾಂಕಿನಲ್ಲಿ ಪ್ಯಾನ್​ ಕಾರ್ಡ್​ ಕಡ್ಡಾಯವೇ ಇಲ್ಲವೇ..? ಎಂದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡುತ್ತಿದೆ. ಎಲ್ಲದಕ್ಕೂ ಉತ್ತರ ಈ ಕೆಳಗಿನಂತೆ ಇದೆ.

ಹೌದು, ಇದೀಗ 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಿ ಬೇರೆ ಮುಖಬೆಲೆಯ ನೋಟುಗಳೊಂದಿಗಿಗೆ ವಿನಿಮಯ (Note Exchange) ಮಾಡಿಕೊಳ್ಳಬಹುದು. ಅಥವಾ ತಮ್ಮ 2,000 ರೂ ನೋಟುಗಳನ್ನು ಬ್ಯಾಂಕಿಗೆ ಕೊಟ್ಟು ತಮ್ಮ ಖಾತೆಗೆ ಹಣವನ್ನು ಜಮೆ ಮಾಡಿಕೊಳ್ಳಬಹುದು. ಜನರಿಂದ ಸ್ವೀಕರಿಸಲ್ಪಟ್ಟ 2,000 ರೂ ನೋಟುಗಳನ್ನು ಬ್ಯಾಂಕುಗಳು ಆರ್​ಬಿಐಗೆ ರವಾನಿಸುತ್ತವೆ.

ಆಗಿದ್ರೆ  2,000 ರೂ ನೋಟು ಠೇವಣಿ ಇಡಲು ಪ್ಯಾನ್ ನಂಬರ್ ಬೇಕೆ?

2,000 ರೂ ನೋಟುಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಇಡಬೇಕೆಂದರೆ ಪ್ಯಾನ್ ನಂಬರ್ ಕೊಡಬೇಕು ಎಂಬಂತಹ ಸುದ್ದಿ ಚಾಲನೆಯಲ್ಲಿದೆ. ಆದರೆ, ಇದು ಅರ್ಧಸತ್ಯ ಮಾತ್ರ. ಆದಾಯ ತೆರಿಗೆ ನಿಯಮದ ಪ್ರಕಾರ ಬ್ಯಾಂಕ್ ಖಾತೆಗೆ 50,000 ರೂ ಜಮೆ ಮಾಡಿದಾಗ ಪ್ಯಾನ್ ನಂಬರ್ ಕೊಡಬೇಕು. ಅಥವಾ ಒಂದು ಖಾತೆಯಿಂದ ಇನ್ನೊಂದು ಖಾತೆಗೆ 50,000 ರೂಗಿಂತ ಹೆಚ್ಚು ಮೊತ್ತದ ವಹಿವಾಟು ನಡೆದಾಗಲೂ ಪ್ಯಾನ್ ನಂಬರ್ ಕೊಡಬೇಕು. ಅದೇ ನಿಯಮ 2,000 ರೂ ನೋಟು ಜಮಾವಣೆಗೂ ಅನ್ವಯ ಆಗುತ್ತದೆ. ಒಂದು ದಿನದಲ್ಲಿ 50,000 ರೂಗಿಂತ ಕಡಿಮೆ ಬೆಲೆಯ 2,000 ರೂ ನೋಟುಗಳನ್ನು ಬ್ಯಾಂಕ್ ಖಾತೆಗೆ ಡೆಪಾಸಿಟ್ ಇಡಲು ಪ್ಯಾನ್ ನಂಬರ್ ಕೊಡುವ ಅಗತ್ಯ ಇರುವುದಿಲ್ಲ.

RELATED ARTICLES

Related Articles

TRENDING ARTICLES