ಬೆಂಗಳೂರು : ಐಪಿಎಲ್-2023 ಕ್ವಾಲಿಫೈಯರ್-1ರ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿಯಾಗಲಿವೆ.
ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಲಿದೆ. ಸೋತ ತಂಡವು ಗೆದ್ದ ತಂಡವನ್ನು ಎಲಿಮಿನೇಟರ್‌ನಲ್ಲಿ ಎದುರಿಸಲಿದೆ.
ಎಲ್ಲ ಪಂದ್ಯ ಸೋತಿರುವ ಚೆನ್ನೈ
ಗುಜರಾತ್ ತಂಡ ಚೆನ್ನೈ ತಂಡಕ್ಕಿಂತ ಬಲಶಾಲಿಯಾಗಿ ಕಾಣುತ್ತದೆ. ಎರಡು ತಂಡಗಳ ಹಿಂದಿನ ಕೆಮಿಸ್ಟ್ರಿ ನೋಡುವುದಾದರೆ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿದ್ದು, ಆಡಿದ್ದ ಎಲ್ಲ ಪಂದ್ಯಗಳಲ್ಲೂ ಗುಜರಾತ್ ಗೆಲುವು ಸಾಧಿಸಿದೆ. ಹೀಗಾಗಿ ಇವತ್ತು ಮತ್ತೆ ಗುಜರಾತ್ ಗೆಲ್ಲುವುದೋ? ಅಥವಾ ಚೆನ್ನೈ ಗೆದ್ದು ಫೈನಲ್ ಗೆ ಕಾಲಿಡುತ್ತೋ ಕಾದು ನೋಡಬೇಕಿದೆ.
The race for the 🔝 Four Teams begins today in Chennai 🏟️
An opportunity to directly make it to the #TATAIPL 2023 #Final 💪🏻@gujarat_titans & @ChennaiIPL are all in readiness for the challenge! Who makes it through 🤔#Qualifier1 | #GTvCSK pic.twitter.com/ykFIVAUi8b
— IndianPremierLeague (@IPL) May 23, 2023
ಇದನ್ನೂ ಓದಿ : ವಿರಾಟ್ ವೀರಾವೇಶ : ‘ಬ್ಯಾಕ್ ಟು ಬ್ಯಾಕ್ ಶತಕ’ ಸಿಡಿಸಿದ ಕಿಂಗ್ ಕೊಹ್ಲಿ
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಎಂ.ಎಸ್ ಧೋನಿ(ನಾಯಕ/ವಿ.ಕೀ), ಋತುರಾಜ್ ಗಾಯಕ್ವಾಡ್, ಕಾನ್ವೆ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಗುಜರಾತ್ ಟೈಟಾನ್ಸ್ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ(ವಿ.ಕೀ), ಶುಭ್ಮನ್ ಗಿಲ್, ದಾಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಯಶ್ ದಯಾಳ್
ಪ್ಲೇಆಫ್ ಪಂದ್ಯಗಳು ಎಲ್ಲಿ? ಯಾವಾಗ?
ಮೇ 23 : ಕ್ವಾಲಿಫೈಯರ್ 1
ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್
ಸ್ಥಳ : ಚೆನ್ನೈ
ಮೇ 24 : ಎಲಿಮಿನೇಟರ್
ಲಕ್ಕೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್
ಸ್ಥಳ : ಚೆನ್ನೈ
ಕ್ವಾಲಿಫೈಯರ್ 2
ಮೇ 26 : ಎಲಿಮಿನೇಟರ್ ಗೆದ್ದವರ ವಿರುದ್ಧ S ಕ್ವಾಲಿಫೈಯರ್ 1 ಸೋತವರು
ಸ್ಥಳ : ಅಹಮದಾಬಾದ್
ಫೈನಲ್ ಪಂದ್ಯ
ಮೇ 28 : ಕ್ವಾಲಿಫೈಯರ್ 1 ವಿಜೇತ ತಂಡದ ವಿರುದ್ಧ ಕ್ವಾಲಿಫೈಯರ್ 2 ವಿಜೇತ ತಂಡ
ಸ್ಥಳ : ಅಹಮದಾಬಾದ್