Friday, November 22, 2024

ಭದ್ರಾವತಿ ಶಾಸಕ ‘ಸಂಗಮೇಶ್ ಗೆ ಸಚಿವ ಸ್ಥಾನ’ ನೀಡಲೇಬೇಕು : ‘ಕೈ’ ಮುಖಂಡರ ಆಗ್ರಹ

ಬೆಂಗಳೂರು : ಭದ್ರಾವತಿ ವಿಧಾನಸಭಾ ಕ್ಷೇತ್ರದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಶಾಂತಿ ಪ್ರಿಯರಾಗಿರುವ ಬಿ.ಕೆ. ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಭದ್ರಾವತಿ ಕಾಂಗ್ರೆಸ್ ಮುಖಂಡರು ಹಾಗೂ ರಾಜ್ಯ ಬಂಜಾರ ಯುವ ರೈತ ಮುಖಂಡರು ಆಗ್ರಹಿಸಿದ್ದಾರೆ. 

ಶಾಂತಿ ಪ್ರಿಯ ಬಿ.ಕೆ. ಸಂಗಮೇಶ್ವರ್ ಗೆ ಸಚಿವ ಸ್ಥಾನ ದೊರಕಿದ್ದೆ ಆದಲ್ಲಿ ಭದ್ರಾವತಿಯಲ್ಲಿ ಅಳಿವಿನ ಅಂಚಿನಲ್ಲಿರುವ ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆಗಳನ್ನು ಪುನರಾರಂಭ ಮಾಡಿಸಿ ಸಾವಿರಾರು ಕಾರ್ಮಿಕರಿಗೆ ಕೆಲಸ ದೊರಕಲಿದೆ.  ಜೊತೆಗೆ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.

ಇನ್ನು ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಕೂಡ ಈ ಬಾರಿ ಸಂಗಮೇಶ್ವರ ಗೆಲ್ಲಿಸಿಕೊಟ್ಟಿದ್ದೆ ಆದಲ್ಲಿ, ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಅಭಯ ನೀಡಿದ್ದರು. ಹೀಗಾಗಿ ಈ ಬಾರಿ ಮಂತ್ರಿಮಂಡಲದಲ್ಲಿ ಅವರನ್ನು ಸಚಿವರನ್ನಾಗಿ ಮಾಡುವುದರ ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸರ್ಕಾರದ ‘ಎಲ್ಲಾ ಕಾಮಗಾರಿ ರದ್ದು’ಗೊಳಿಸಿದ ರಾಜ್ಯ ಸರ್ಕಾರ

ಸಂಗಮೇಶ್ ಅವರಿಗೆ ಬಿಜೆಪಿಯಿಂದ ಸಾಕಷ್ಟು ಆಫರ್ ಗಳು ಬಂದಿದ್ದರೂ ಕೂಡ, ಅವರು ನಯವಾಗೆ ತಿರಸ್ಕರಿಸಿ ನಾನು ಪಕ್ಷಕ್ಕೆ ನಿಷ್ಠ ಎಂದು ಅವರು ಪಕ್ಷದಲ್ಲಿ ಉಳಿದುಕೊಂಡಿದ್ದರು. ಹೀಗಾಗಿ ಈ ಬಾರಿ ಸಚಿವ ಸ್ಥಾನ ನೀಡಿದೆ ಆದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಭದ್ರಾವತಿ ತಾಲೂಕಿನ ಅಭಿವೃದ್ಧಿಯನ್ನು ಕಾಣಲಿದ್ದೇವೆ ಎಂದು ಹೇಳಿದ್ದಾರೆ.

ಒಂದು ವೇಳೆ, ಈ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದೆ ಹೋದಲ್ಲಿ ಭದ್ರಾವತಿ ನಗರದಲ್ಲಿ ಶಾಂತಿಯುತವಾಗಿ ಯಾವುದೇ ಅಶಾಂತಿಯನ್ನು ಸೃಷ್ಠಿಸದೆ ಕಾಂಗ್ರೆಸ್ ಮುಖಂಡರು ಸೇರಿದಂತೆ ನಗರದ ಎಲ್ಲಾ ಸಂಗಮೇಶ್ ಅಭಿಮಾನಿಗಳು ಶಾಂತಿಯತವಾಗಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES