ಬೆಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕಾರ ಮಾಡಿರುವ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಸರ್ ಹಾಗೂ ಡಿ.ಕೆ ಶಿವಕುಮಾರ್ ಅಣ್ಣನಿಗೆ ಅಭಿನಂದನೆಗಳು. ನಿಮ್ಮ ಚುನಾವಣಾ ಭಾಗ್ಯಗಳನ್ನು ಸರ್ಕಾರಿ ಆದೇಶಗಳಾಗಿ ಘೋಷಿಸುವ ಜೊತೆಗೆ ಈ ಕೆಳಕಂಡ ಅಂಶಗಳನ್ನೂ ಶ್ವೇತಪತ್ರದ ಮೂಲಕ ಬಹಿರಂಗಪಡಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
- ರಾಜ್ಯದ ಈ ವರ್ಷದ ಬಜೆಟ್ ಗಾತ್ರವೆಷ್ಟು?
- ಈ ದಿನದವರೆಗಿನ ನಮ್ಮ ಒಟ್ಟು ಸಾಲ ಎಷ್ಟಿದೆ?
- ವಾರ್ಷಿಕ ಬಡ್ಡಿ ಮತ್ತು ಅಸಲು ಮರುಪಾವತಿಗೆ ಎಷ್ಟು ಬೇಕು?
- ಸರ್ಕಾರಿ ಉದ್ಯೋಗಿಗಳ ಸಂಬಳಕ್ಕೆ ಎಷ್ಟು ಸಾವಿರ ಕೋಟಿ ಬೇಕು?
- ಸರ್ಕಾರಿ ಯೋಜನೆಗಳ ಮುಂದುವರಿಕೆಗೆ ಎಷ್ಟು ಬೇಕು?
1. ರಾಜ್ಯದ ಈ ವರ್ಷದ ಬಜೆಟ್ ಗಾತ್ರವೆಷ್ಟು?
2. ಈ ದಿನದವರೆಗಿನ ನಮ್ಮ ಒಟ್ಟು ಸಾಲ ಎಷ್ಟಿದೆ?
3. ವಾರ್ಷಿಕ ಬಡ್ಡಿ ಮತ್ತು ಅಸಲು ಮರುಪಾವತಿಗೆ ಎಷ್ಟು ಬೇಕು?
4 ಸರ್ಕಾರಿ ಉದ್ಯೋಗಿಗಳ ಸಂಬಳಕ್ಕೆ ಎಷ್ಟು ಸಾವಿರ ಕೋಟಿ ಬೇಕು?
5. ಸರ್ಕಾರಿ ಯೋಜನೆಗಳ ಮುಂದುವರಿಕೆಗೆ ಎಷ್ಟು ಬೇಕು? 2/2
— Pratap Simha (@mepratap) May 20, 2023
ಇದನ್ನೂ ಓದಿ : ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕಾರ
2028ರಲ್ಲಿ ಮತ್ತೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಂದಾಗ ರಾಜ್ಯದ ಅರ್ಥವ್ಯವಸ್ಥೆಯ ಆರೋಗ್ಯ ಹೇಗಿರುತ್ತೆ ಎಂಬುದರ ಅಂದಾಜು ಸಿಗಲಿ ಎಂಬ ಕಾರಣಕ್ಕೆ ಈ ಪ್ರಶ್ನೆಗಳು ಅಷ್ಟೇ ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದಾರೆ.
ನೀವು ಮಾಡುವ ಸಾಲ ಎಷ್ಟು?
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಒಟ್ಟಾರೆ ಸಾಲದ ಜೊತೆ 3 ವರ್ಷ 10 ತಿಂಗಳ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಸಾಲದ ಹೊರೆಯನ್ನೂ ಬಹಿರಂಗಪಡಿಸಿ, ಮುಂದೆ ನೀವು ಮಾಡಲಿರುವ ಸಾಲದ ಅಂದಾಜೂ 2028ರಲ್ಲಿ ಸಿಗುತ್ತದೆ ಎಂದು ಕುಟುಕಿದ್ದಾರೆ.
2028ರಲ್ಲಿ ಮತ್ತೆ ಚುನಾವಣೆ ಬಂದಾಗ ರಾಜ್ಯದ ಅರ್ಥವ್ಯವಸ್ಥೆಯ ಅರೋಗ್ಯ ಹೇಗಿರುತ್ತೆ ಎಂಬುದರ ಅಂದಾಜು ಸಿಗಲಿ ಎಂಬ ಕಾರಣಕ್ಕೆ ಈ ಪ್ರಶ್ನೆಗಳು ಅಷ್ಟೇ.
— Pratap Simha (@mepratap) May 20, 2023