ಬೆಂಗಳೂರು : ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಧರ್ಮಶಾಲಾದ(ಹಿಮಾಚಲ್ ಪ್ರದೇಶ ಕ್ರಿಕೆಟ್ ಸ್ಡೇಡಿಯಂ)ಲ್ಲಿ ಪಂದ್ಯ ನಡೆಯುತ್ತಿದ್ದು, ಎರಡೂ ತಂಡಗಳು ಪ್ಲೇ ಆಫ್ ರೇಸ್‌ನಲ್ಲಿವೆ. ಹೀಗಾಗಿ, ಆರ್ ಆರ್ ಹಾಗೂ ಪಂಜಾಬ್ ಗೆ ಇದು ಡು ಆರ್ ಡೈ ಮ್ಯಾಚ್ ಆಗಿದೆ.
ಟೂರ್ನಿಯಲ್ಲಿ ರಾಜಸ್ಥಾನ್ ತಂಡ ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 7 ಪಂದ್ಯದಲ್ಲಿ ಸೋತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನೂ ಪಂಜಾಬ್ ತಂಡವು 13 ಪಂದ್ಯಗಳಲ್ಲಿ 6ರಲ್ಲಿ ಗೆಲುವು, 7ರಲ್ಲಿ ಸೋಲು ಕಂಡು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ.
🚨 Toss Update 🚨@rajasthanroyals win the toss and elect to field first against @PunjabKingsIPL.
Follow the match ▶️ https://t.co/3cqivbD81R #TATAIPL | #PBKSvRR pic.twitter.com/7j2KjpH0yr
— IndianPremierLeague (@IPL) May 19, 2023
ಪಂದ್ಯ ಗೆದ್ರು ಅವಕಾಶವಿಲ್ಲ
ಇನ್ನೂ ಇಂದಿನ ಪಂದ್ಯದಲ್ಲಿ ಯಾರೇ ಗೆದ್ದರೂ ಪ್ಲೇ ಆಫ್ ಅವಕಾಶ ತೀರಾ ಕಡಿಮೆ. ಪ್ಲೇ ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವಿನ ಅವಶ್ಯಕತೆಯಿದೆ. ಆದರೆ, ಇತರ ತಂಡಗಳ ಪಂದ್ಯಗಳ ಮೇಲೆ ರಾಜಸ್ಥಾನ್ ಹಾಗೂ ಪಂಜಾಬ್ ತಂಡದ ಪ್ಲೇ ಆಫ್ ಕನಸು ಅವಲಂಬಿಸಿದೆ.
ಪಂಜಾಬ್ ಕಿಂಗ್ಸ್ ತಂಡ
ಶಿಖರ್ ಧವನ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್, ಅಥರ್ವ್ ಟೈಡೆ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿ.ಕೀ.), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.
Here are the Playing XIs for tonight's clash 👌🏻
Follow the match ▶️ https://t.co/3cqivbD81R #TATAIPL | #PBKSvRR pic.twitter.com/YbUvKowD2e
— IndianPremierLeague (@IPL) May 19, 2023
ರಾಜಸ್ಥಾನ್ ರಾಯಲ್ಸ್ ತಂಡ
ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಆಡಮ್ ಝಂಪಾ, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್
ಪ್ಲೇಆಫ್ ಅವಕಾಶಗಳು
ಗುಜರಾತ್ : ಪ್ಲೇಆಫ್ ಅರ್ಹತೆ
ಚೆನ್ನೈ : 91%
ಲಕ್ನೋ : 90%
ಆರ್ ಸಿಬಿ : 61%
ಮುಂಬೈ : 52%
ರಾಜಸ್ಥಾನ್ : 3%
ಕೆಕೆಆರ್ : 2%
ಪಂಜಾಬ್ : 1%