Sunday, November 24, 2024

HD Deve Gowda Birthday: ಮಣ್ಣಿನ ಮಗನಿಗೆ 91ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಕನ್ನಡಿಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರವರ 91ನೇ ಹುಟ್ಟುಹಬ್ಬ.

ಹೌದು,  ರಾಜ್ಯ ನೀರಾವರಿ ಯೋಜನೆಗಳ ಪಿತಾಮಹ, ರಾಜಕೀಯ ಚಾಣಕ್ಯ, ದೀನ ದಲಿತರ ಧ್ವನಿ, ರೈತರ ನಾಡಿ ಮಿಡಿತ ಅರಿತಿರುವ ಮಣ್ಣಿನ ಮಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಇಂದು 91ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಅವರು ನಡೆದು ಬಂದ ಹಾದಿ ಹೀಗಿದೆ.

  • ಮೇ 18, 1933ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು  ಸಿವಿಲ್ ಎಂಜಿನಿಯರಿಂದ ಡಿಪ್ಲೊಮಾ ಪಡೆದಿರುವ ಶ್ರೀದೇವೇಗೌಡರು 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು.
  • ಹೆಚ್.ಡಿ.ದೇವೇಗೌಡರ ಅವರು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು ಹಾಗೂ ಭಾರತದ ಭವ್ಯ ಸಂಸ್ಕಂತಿ ಪರಂಪರೆಯ ಪ್ರಶಂಸಕರು ಕೂಡ ಆಗಿದ್ದರು
  • ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು.
  • ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ಇವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಹಂತ ಹಂತವಾಗಿ ಮೇಲೇರಿತು. ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ನಂತರ ಹೊಳೆನರಸೀಪುರ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು.
  • 28 ವರ್ಷವಿದ್ದಾಗ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 1962ರಲ್ಲಿ ಕರ್ನಾಟಕ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾಗಿದ್ದರು.
  • ಹೊಳೆನರಸೀಪುರ ಕ್ಷೇತ್ರದಿಂದ ಸತತ ಮೂರು ಬಾರಿ ಅಂದರೆ ನಾಲ್ಕನೇ (1967-71), ಐದನೇ (1972-77) ಹಾಗೂ ಆರನೇ (1978-83) ವಿಧಾನಸಭೆಗಳಿಗೆ ಚುನಾಯಿತರಾದರು.
  • ಇವರು ಮಾರ್ಚ್ 1972 ರಿಂದ ಮಾರ್ಚ್ 1976 ಹಾಗೂ ನವೆಂಬರ್ 1976 ರಿಂದ ಡಿಸೆಂಬರ್ 1977ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿಸಲ್ಲಿಸಿದ್ದರು.
  • ದೇವೇಗೌಡರು ನವೆಂಬರ್ 22, 1982ರಂದು ಆರನೇ ವಿಧಾನಸಭೆಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಏಳನೇ ಮತ್ತು ಎಂಟನೇ ವಿಧಾನಸಭೆಯ ಸದಸ್ಯರಾಗಿ, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು.
  • 1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್​ಗೆ ಆಯ್ಕೆಯಾದ ಅವರು ವಿಶೇಷವಾಗಿ ರೈತರು ಒಳಗೊಂಡಂತೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು.
  • ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೇ 30, 1996ರಂದು ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ರಾಜೀನಾಮೆ ನೀಡಿದ್ದರು

 

RELATED ARTICLES

Related Articles

TRENDING ARTICLES