Monday, November 25, 2024

ಕರೆಂಟ್ ಬಿಲ್ ಕಟ್ಟಲ್ಲ, ಬೇಕಾದ್ರೆ ‘ಕಾಂಗ್ರೆಸ್ ನವರನ್ನೇ ಕೇಳು’ : ಬಿಲ್ ಕಲೆಕ್ಟರ್ ಗೆ ಗ್ರಾಮಸ್ಥರ ಕ್ಲಾಸ್

ಬೆಂಗಳೂರು : ಅತ್ತ ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇತ್ತ ಜನರು ಕೂಡ ಕರೆಂಟ್ ಬಿಲ್ ಕಾಂಗ್ರೆಸ್​ ಪಕ್ಷದವರನ್ನೇ ಕೇಳಿ ಎನ್ನುತ್ತಿದ್ದಾರೆ.

ಕಾಂಗ್ರೆಸ್​ ಪಕ್ಷ ಬಹುಮತ ಸಿಕ್ಕ ಹಿನ್ನೆಲೆ ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಎಂದು ಜನರು ಹೇಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದಲ್ಲಿ ಜನರು ಬಿಲ್​ ಪಾವತಿ ಮಾಡಿಸಿಕೊಳ್ಳಲು ಬಂದ ಕೆಇಬಿ ಬಿಲ್ ಕಲೆಕ್ಟರ್​ನನ್ನೇ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ಬಿಲ್ ತಗೆದುಕೋ ನಾವು ಬಿಲ್ ಕಟ್ಟಲ್ಲ. ಬೇಕಾದರೆ ನಿನ್ನ ಆಫೀಸರ್​ ಬಳಿ ಹೋಗಿ ಹೇಳು ಎಂದು ಜನರು ಹೇಳುತ್ತಿದ್ದು ಗ್ರಾಮದಲ್ಲಿ ಯಾರ ಮನೆಗೂ ಹೋಗಿ ಬಿಲ್ ಕೇಳಬೇಡ. ಕಮರ್ಷಿಯಲ್ ಮೀಟರ್ ಗೆ ಮಾತ್ರ ಬಿಲ್ ಕೇಳು ಮನೆಗಳ ತಂಟೆಗೆ ಬರಬೇಡ ಎಂದು ಬಿಲ್ ಕಲೆಕ್ಟರ್​ಗೆ ಜನರು ಕ್ಲಾಸ್ ಕೂಡ ತಗೆದುಕೊಂಡಿದ್ದಾರೆ.

ಇದನ್ನೂ ಓದಿ : ಸರ್ಕಾರ ಕೆಡವಿದ್ದು ಸಿದ್ದು; ಕೆ. ಸುಧಾಕರ್​ ಸ್ಪೋಟಕ ಬಾಂಬ್..!

ಕೊನೆಗೂ ಗ್ರಾಮಸ್ಥರು ವಿದ್ಯುತ್ ಬಿಲ್ ಪಾವತಿಸದಿರಲು ಪಟ್ಟು ಹಿಡಿದಿದ್ದಾರೆ. ಬಿಲ್ ಕಲೆಕ್ಟರ್ ಗೇ ಆವಾಜ್ ಹಾಕಿದ ಗ್ರಾಮಸ್ಥರು ಗ್ರಾಮದಿಂದ ಹೊರ ಕಳಿಸಿದ್ದಾರೆ.

ಚಿತ್ರದುರ್ಗದಲ್ಲೂ ಬಿಲ್ ಕಲೆಕ್ಟರ್ ​ಗೆ ಆವಾಜ್

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಮೀಟರ್ ರೀಡರ್​ ಗೆ ಆವಾಜ್ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿತ್ತು. ಚಿತ್ರದುರ್ಗದ ಜಾಲಿಕಟ್ಟೆಯಲ್ಲಿ ವಿದ್ಯುತ್ ಬಿಲ್ ಪಾವತಿಸಲು ಜನರು ನಿರಾಕರಿಸಿದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಮೀಟರ್ ರೀಡರ್ ಗೆ ಗ್ರಾಮಸ್ಥರು ಆವಾಜ್ ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯಲ್ಲೂ ಇದೇ ಪ್ರಸಂಗ ನಡೆದಿದೆ.

RELATED ARTICLES

Related Articles

TRENDING ARTICLES