ಬೆಂಗಳೂರು : ಮುಂಬೈ ಇಂಡಿಯನ್ಸ್ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡ 178 ರನ್ ಗಳ ಸವಾಲಿನ ಟಾರ್ಗೆಟ್ ನೀಡಿದೆ.
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಕಲೆ ಹಾಕಿತು.
ಲಕ್ನೋ ಪರ ಮಾರ್ಕಸ್ ಸ್ಟೋನಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ನೊಂದಿಗೆ ಅಜೇಯ 89 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ನಾಯಕ ಕೃನಾಲ್ ಪಾಂಡ್ಯ 49 ರನ್ ಗಳಿಸಿದರು.
Innings break!
An exceptional knock from @MStoinis inspires @LucknowIPL to a 177/3 in the first innings 🔥🔥
A huge chase coming up for @mipaltan. Can they do it?
Scorecard ▶️ https://t.co/yxOTeCROIh #TATAIPL | #LSGvMI pic.twitter.com/IuqLDqCyWy
— IndianPremierLeague (@IPL) May 16, 2023
ಉಳಿದಂತೆ, ಕ್ವಿಂಟನ್ ಡಿ ಕಾಕ್ 16, ನಿಕೋಲಸ್ ಪೂರನ್ ಅಜೇಯ 8 ರನ್ ಗಳಿಸಿದರು. ಮುಂಬೈ ಪರ ಜೇಸನ್ ಬಹ್ರೆನ್ಡಾರ್ಫ್ 2, ಪಿಯೂಷ್ ಚಾವ್ಲಾ ಒಂದು ವಿಕೆಟ್ ಪಡೆದರು.
6,0,4,4,6,4 = 24 ರನ್
ಮುಂಬೈ ಬೌಲರ್ ಜೋರ್ಡನ್ ಎಸೆದ 18ನೇ ಓವರ್ ನಲ್ಲಿ ಸ್ಟೊಯಿನಿಸ್ 24 ರನ್ ಚಚ್ಚಿದರು. ಸತತವಾಗಿ 6,0,4,4,6,4 (ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ) ಬಾರಿಸಿದರು. ಹೀಗಾಗಿ, ಆ ಓವರ್ ನಲ್ಲಿ 24 ರನ್ ಬಂದವು. ಸಂಕಷ್ಟದಲ್ಲಿದ್ದ ಲಕ್ನೋ ತಂಡಕ್ಕೆ ಸ್ಟೊಯಿನಿಸ್ ಆಟ ಬೂಸ್ಟ್ ನೀಡಿತು.
6⃣.4⃣4⃣6⃣4⃣
Marcus Stoinis at his best 🔥🔥
Follow the match ▶️ https://t.co/yxOTeCROIh #TATAIPL | #LSGvMI pic.twitter.com/RSovpw3nPp
— IndianPremierLeague (@IPL) May 16, 2023
ಗುಜರಾತ್ ಪ್ಲೇ ಆಫ್ ಪ್ರವೇಶ
ಹೈದರಾಬಾದ್ ವಿರುದ್ಧ ಗುಜರಾತ್ 34 ರನ್ಗಳ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಗುಜರಾತ್ ಟೈಟಾನ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ 18 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಇನ್ನು ಕೊನೆಯ ಮ್ಯಾಚ್ನಲ್ಲಿ ಸೋತರೂ ಅಂಕಪಟ್ಟಿಯ್ಲಿ 2ನೇ ಸ್ಥಾನ ಪಡೆಯುವುದು ಖಚಿತವಾಗಿದೆ.
From excelling together as a unit to the intriguing competition of becoming the leading wicket-taker of the season 😃
Celebrating #GT's march to the Playoffs with @MdShami11 & @rashidkhan_19 😎 – By @Moulinparikh
Full Interview 🎥🔽 #TATAIPL https://t.co/t3jd2Efwv5 pic.twitter.com/hp55lbi8n3
— IndianPremierLeague (@IPL) May 16, 2023
ಗುಜರಾತ್ ವಿರುದ್ಧ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. 12 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದಿರುವ ಹೈದರಾಬಾದ್ ತಂಡ ಇನ್ನೂ 2 ಪಂದ್ಯ ಆಡಲಿದೆ. ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್ ಗೆ ತಲುಪಲು ಆಗಲ್ಲ.