ಬೆಂಗಳೂರು : ದೇಶ ಹಾಗೂ ವಿದೇಶದಲ್ಲೂ ‘ದಿ ಕೇರಳ ಸ್ಟೋರಿ’ ಸಿನಿಮಾ ಸದ್ದು ಮಾಡುತ್ತಿದೆ. ಇದೀಗ, ರಾಜ್ಯದಲ್ಲಿ ‘ಕೇರಳ ಸ್ಟೋರಿ’ ಫೀವರ್ ಹೆಚ್ಚಾಗಿದೆ.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಣೆಗೆ ಉಚಿತ ವ್ಯವಸ್ಥೆ ಮಾಡಿದ್ದು, ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದಾರೆ.
ವಿಜಯಪುರದ ಅಪ್ಸರಾ ಚಿತ್ರ ಮಂದಿರದಲ್ಲಿ ಮೂರು ದಿನಗಳ ಕಾಲ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಹಿಂದೂ ಯುವತಿಯರು ಸಿನಿಮಾ ನೋಡಲು ಚಿತ್ರ ಮಂದಿರ ಬುಕ್ ಮಾಡಲಾಗಿದೆ. ವಿಜಯಪುರದ ಹಿಂದೂಗಳಿಗೆ ಚಿತ್ರ ತೋರಿಸಲು ಶಾಸಕ ಯತ್ನಾಳ್ ಚಿತ್ರ ಮಂದಿರ ಬುಕ್ ಮಾಡಿದ್ದಾರೆ.
ಇದನ್ನೂ ಓದಿ : ಯುಪಿಯಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ತೆರಿಗೆ ಮುಕ್ತ : ಸಿಎಂ ಯೋಗಿ ಆದಿತ್ಯನಾಥ್
ಮೂರು ದಿನ ಉಚಿತ ಪ್ರದರ್ಶನ
ಮೂರು ದಿನಗಳ ಕಾಲ ಬೆಳಗ್ಗೆ 12 ಗಂಟೆಯ ಶೋ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಮೇ 16,17,18ರಂದು ಮೂರು ದಿನಗಳ ಕಾಲ ಉಚಿತವಾಗಿ ಸಿನಿಮಾ ವೀಕ್ಷಿಸಬಹುದಾಗಿದೆ. ಹಿಂದೂ ಯುವತಿಯರು ಸಿನಿಮಾ ನೋಡುವಂತೆ ಯತ್ನಾಳ್ ಬೆಂಬಲಿಗರು ಕರೆ ನೀಡಿದ್ದಾರೆ.
ಬೇರೆ ಬೇರೆ ರಾಜ್ಯದಲ್ಲಿ ಈ ಸಿನಿಮಾ ನಿಷೇಧ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಬಳಿಕ ಸಿನಿಮಾ ನಿಷೇಧ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಎಲ್ಲ ಹಿಂದೂ ಯುವತಿಯರು ಸಿನಿಮಾ ನೋಡುವಂತೆ ಮನವಿ ಮಾಡಲಾಗಿದೆ. ಇದರಿಂದ ಪ್ರೇಕ್ಷಕೆಉ ಫಿಲ್ ಖುಷ್ ಆಗಿದ್ದಾರೆ.