ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆರ್ ಸಿಬಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ಆರ್ ಆರ್ ಗೆಲುವಿಗೆ 172 ರನ್ ಗಳಿಸಬೇಕಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ರಾಜಸ್ಥಾನ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಮೊಹಮ್ಮದ್ ಸಿರಾಜ್ ಬೌಲ್ ಮಾಡಿದ ಮೊದಲ ಓವರ್ ನಲ್ಲಿ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಸಂಕಷ್ಟದಲ್ಲಿ ರಾಜಸ್ಥಾನ್
ಜೈಸ್ವಾಲ್ ಬಳಿಕ ಮತ್ತೊಬ್ಬ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೂಡ ಶೂನ್ಯಕ್ಕೆ ಔಟ್ ಆದರು. ಪರ್ನೆಲ್ ಬೌಲ್ ಮಾಡಿದ 2ನೇ ಓವರ್ನ 3ನೇ ಎಸೆತದಲ್ಲಿ ಬಟ್ಲರ್ ಅವರು ಸಿರಾಜ್ ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಇನ್ನೂ ನಾಯಕ ಸಂಜು ಸ್ಯಾಮ್ಸನ್ ಕೇವಲ 4 ರನ್ ಗಳಿಸಿ ಪರ್ನೆಲ್ ಗೆ ವಿಕೆಟ್ ಒಪ್ಪಿಸಿದರು.
Innings break!
Fifties from @faf1307 & @Gmaxi_32 propel @RCBTweets to a strong first innings total 🙌
Will @rajasthanroyals chase this down?
Scorecard ▶️ https://t.co/NMSa3HfybT #TATAIPL | #RRvRCB pic.twitter.com/HOb6TkWQ9U
— IndianPremierLeague (@IPL) May 14, 2023
ಇದನ್ನೂ ಓದಿ : ವಾಂಖೆಡೆಯಲ್ಲಿ ‘ಸೂರ್ಯ ಸ್ಫೋಟ’ : 49 ಬಾಲ್ ನಲ್ಲೇ ಭರ್ಜರಿ ಶತಕ ಸಿಡಿಸಿದ SKY
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ವಿರಾಟ್ ಕೊಹ್ಲಿ (18) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಜೊತೆಯಾದ ನಾಯಕ ಫಾಪ್ ಡುಪ್ಲೆಸಿ ಹಾಗೂ ಮ್ಯಾಕ್ಸ್ ವೆಲ್ ಆರ್ ಆರ್ ಬೌಲರ್ ಗಳನ್ನು ಬೆಂಡೆತ್ತಿದರು. ನಾಯಕ ಫಾಪ್ 44 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಮ್ಯಾಕ್ಸ್ ವೆಲ್ 33 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಬಾರಿಸಿ 54 ರನ್ ಚಚ್ಚಿದರು.
ಶೂನ್ಯಕ್ಕೆ ಕಾರ್ತಿಕ್ ಔಟ್
ಫಾಪ್, ಮ್ಯಾಕ್ಸಿ ಔಟ್ ಆದ ಬಳಿಕ ಕ್ರೀಸ್ ಗೆ ಬಂದ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಝಂಪಾ ಬೌಲಿಂಗ್ ನಲ್ಲಿ ಕಾರ್ತಿಕ್ ಎಲ್ಬಿ ಬಲೆಗೆ ಬಿದ್ದರು. ಆ ಮೂಲಕ ಟೂರ್ನಿಯಲ್ಲಿ ಎರಡನೇ ಬಾರಿ ಶೂನ್ಯ ಸುತ್ತಿದರು. ಮಹಿಪಾಲ್ ಕೇವಲ 1 ರನ್ ಗೆ ಔಟಾದರು.
ಕೊನೆಯಲ್ಲಿ ಅನುಜ್ ರಾವತ್ ಅಜೇಯ 29 ರನ್ ಸಿಡಿಸಿ ಆರ್ ಸಿಬಿ ಮೊತ್ತವನ್ನು 171 ರನ್ ಗಳಿಗೆ ಏರಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಆಡಮ್ ಝಂಪಾ 2, ಆಸಿಫ್ 2, ಸಂದೀಪ್ ಶರ್ಮಾ 1 ವಿಕೆಟ್ ಪಡೆದರು.