Monday, October 28, 2024

`ಸುಪ್ರೀಂ’ ತೀರ್ಪು : ಅನರ್ಹರಿಗೆ ಚುನಾವಣೆ ಓಕೆ – ಮಂತ್ರಿಗಿರಿಗೆ ಕೊಕ್ಕೆ!

ನವದೆಹಲಿ : 17 ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅನರ್ಹ ಶಾಸಕರಿಗೆ ಕಹಿ ನಡುವೆಯೂ ಬಿಗ್ ರಿಲೀಫ್ ಸಿಕ್ಕಿದೆ.
ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದ್ದು, ನಿಕಟಪೂರ್ವ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಎತ್ತಿಹಿಡಿದಿದೆ. ಆ ಮೂಲಕ ಶಾಸಕರ ಅನರ್ಹತೆ ಮಾನ್ಯಗೊಳಿಸಿದ್ದು, ಅಧಿಕಾರದಲ್ಲಿರುವ ಆಡಳಿತ ಮತ್ತು ಪ್ರತಿಪಕ್ಷ ಗಳಲ್ಲಿ ನೈತಿಕತೆ ಮುಖ್ಯವಾಗಿರಬೇಕು ಎಂದು ಅನರ್ಹ ಶಾಸಕರಿಗೆ ಛೀಮಾರಿ ಹಾಕಿದೆ. ಆದರೆ, ಉಪ ಚುನಾವಣೆಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡುವ ಮೂಲಕ ರಿಲೀಫ್ ಕೂಡ ನೀಡಿದೆ.
ಅನರ್ಹತೆ ಮಾನ್ಯ ಮಾಡಿದ್ದರೂ ಅನರ್ಹತೆ ಅವಧಿ ರದ್ದುಗೊಳಿಸಿರುವುದರಿಂದ ಇದೀಗ ಸ್ಪೀಕರ್ ಅಂಗಳದಲ್ಲಿ ಶಾಸಕರ ರಾಜೀನಾಮೆ ಅಂಗೀಕಾರ ಬಾಕಿ ಇದೆ. ಸದ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಸ್ಥಾನದಲ್ಲಿದ್ದು, 17 ಮಂದಿ ಶಾಸಕರ ರಾಜೀನಾಮೆ ಪತ್ರಗಳು ಇವರ ಮುಂದೆ ಬರಲಿದೆ. ಸ್ಪೀಕರ್ ಅಧಿಕೃತ ರಾಜೀನಾಮೆ ಸ್ವೀಕರಿಸಿದ ಬಳಿಕವೇ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.
ಅನರ್ಹತೆಯನ್ನು ಕೋರ್ಟ್ ಎತ್ತಿ ಹಿಡಿದಿದ್ದು, ಅನರ್ಹರು ಮತದಾರರಿಂದ ಮರು ಆಯ್ಕೆ ಆಗುವವರೆಗೂ ಸಚಿವರಾಗುವಂತಿಲ್ಲ. ಉಪ ಚುನಾವಣೆಯಲ್ಲಿ ಗೆದ್ದಲ್ಲಿ ಮಾತ್ರ ಸಚಿವರಾಗಬಹುದು.

RELATED ARTICLES

Related Articles

TRENDING ARTICLES