Friday, November 22, 2024

ಕಮಲ ಕಿಲಕಿಲ : ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಚುರುಕಿನಿಂದ ಆರಂಭವಾಗಿದ್ದು ಆಡಳಿತರೂಢ ಬಿಜೆಪಿ ಆರಂಭದಲ್ಲಿ ಭಾರೀ ಮುನ್ನಡೆ ಸಾಧಿಸಿದೆ.

ಕರಾವಳಿ ಭಾಗ, ಕಿತ್ತೂರು ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಮಲ ಕಿಲಕಿಲ ಅನ್ನುತ್ತಿದೆ. ಬಿಜೆಪಿ ನಾಯಕರು ಇದೇ ಟ್ರೆಂಡ್ ಮುಂದುವರೆಯುವ ಭರವಸೆಯಲ್ಲಿದ್ದು ಮತ್ತೊಮ್ಮೆ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ.

ಹಳೆ ಮೈಸೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಮುನ್ನಡೆ ಕಂಡು ಬರುತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 2 ಕ್ಷೇತ್ರದಲ್ಲಿ ಜೆಡಿಎಸ್, 1 ಕ್ಷೇತ್ರದಲ್ಲಿ ಪಕ್ಷೇತರ​ ಮುನ್ನಡೆ ಸಾಧಿಸಿದ್ದಾರೆ.

ಆರಂಭಿಕ ಮುನ್ನಡೆ ಸಾಧಿಸಿದವರು

ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಮುನ್ನಡೆ

ಪದ್ಮನಾಭನಗರದಲ್ಲಿ ಆರ್.ಅಶೋಕ್ ಮುನ್ನಡೆ

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ಗೆ ಮುನ್ನಡೆ

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮುನ್ನಡೆ

ಮಾಗಡಿಯಲ್ಲಿ ಕಾಂಗ್ರೆಸ್​ನ ಹೆಚ್.ಸಿ.ಬಾಲಕೃಷ್ಣಗೆ ಮುನ್ನಡೆ

ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಮುನ್ನಡೆ

ಆರ್​.ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಮುನ್ನಡೆ

ಮಲ್ಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ನಾರಾಯಣ್​ಗೆ ಮುನ್ನಡೆ

ಕೆಆರ್​​ ಪುರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್​ಗೆ ಮುನ್ನಡೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪಗೆ ಮುನ್ನಡೆ

ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್​.ವಿ.ರಾಮಚಂದ್ರಪ್ಪ ಮುನ್ನಡೆ

RELATED ARTICLES

Related Articles

TRENDING ARTICLES