Friday, November 22, 2024

ಆರ್ ಸಿಬಿ-ಮುಬೈ ರೋಚಕ ಕಾಳಗ : ಪಂದ್ಯಕ್ಕೂ ಮುನ್ನ ಬೆಂಗಳೂರಿಗೆ ಬಿಗ್ ಶಾಕ್

ಬೆಂಗಳೂರು : ಐಪಿಎಲ್ 16ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ರೋಚಕ ಹಣಾಹಣಿ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳ ಚಿತ್ತ ವಾಂಖೆಡೆಯತ್ತ ನೆಟ್ಟಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಮಾಜಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಜಿದ್ದಾಜಿದ್ದಿನ ಮ್ಯಾಚ್ ನಡೆಯಲಿದೆ.

ಎರಡೂ ತಂಡಗಳು ಕೂಡ ಟೂರ್ನಿಯಲ್ಲಿ ತಲಾ 10 ಪಂದ್ಯಗಳನ್ನು ಆಡಿ 10 ಅಂಕಗಳನ್ನು ಪಡೆದುಕೊಂಡಿವೆ. ರನ್‌ರೇಟ್‌ನಲ್ಲಿ ಆರ್‌ಸಿಬಿ ಮುಂದಿದೆ. ಪ್ಲೇ-ಆಫ್ ಲೆಕ್ಕಾಚಾರ ಹತ್ತಿರದಲ್ಲೇ ಇರುವುದರಿಂದ ಈ ಮ್ಯಾಚ್ ಭಾರೀ ಮಹತ್ವ ಪಡೆದುಕೊಂಡಿದೆ. ಗೆದ್ದ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿ ಪ್ಲೇ-ಆಫ್‌ಗೆ ಹತ್ತಿರವಾಗಲಿದೆ.

ಪಂದ್ಯಕ್ಕೂ ಮುನ್ನ ಬಿಗ್ ಶಾಕ್

ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಕನಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ದೊಡ್ಡ ಶಾಕ್ ಎದುರಾಗಿದೆ. ಪಂಜಾಬ್ ವಿರುದ್ಧ ಕೊಲ್ಕತ್ತಾ ಗೆದ್ದ ಕಾರಣದಿಂದ ಆರ್ ಸಿಬಿ ಅಂಕಪಟ್ಟಿಯಲ್ಲಿ ದಿಢೀರ್ ಕುಸಿತ ಕಂಡು 6ನೇ ಸ್ಥಾನಕ್ಕೆ ತಲುಪಿದೆ.

ಗುಜರಾತ್, ಚೆನ್ನೈ, ಲಕ್ನೋ ಹಾಗೂ ರಾಜಸ್ಥಾನ ತಂಡಗಳು ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನದಲ್ಲಿವೆ. ಆರ್‌ಸಿಬಿ ಐದರಿಂದ 6ನೇ ಸ್ಥಾನಕ್ಕೆ ಕುಸಿದಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ನಾಲ್ಕನೇ ಸ್ಥಾನ ಪಡೆಯುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ‘ಕಿಂಗ್ ಕೊಹ್ಲಿ’ ಮತ್ತೊಂದು ದಾಖಲೆ

ಆರ್ ಸಿಬಿ ಸಂಭಾವ್ಯ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನೂಜ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ವ್ಯಾನ್ ಪಾರ್ನೆಲ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಹ್ಯಾಜಲ್​ವುಡ್

ಮುಂಬೈ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ನೇಹಲ್ ವಡೇರಾ, ಟ್ರಿಸ್ಟನ್ ಸ್ಟಬ್ಸ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಆಕಾಶ್ ಮದವಾಲ್

RELATED ARTICLES

Related Articles

TRENDING ARTICLES