ಬೆಂಗಳೂರು : ಗುಜರಾತ್ ಟೈಟನ್ಸ್ ತಂಡ ಲಕ್ನೋ ಗೆಲುವಿಗೆ 228 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ. ಅಹಮದಾಬಾದ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು.
ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಾಹ ಹಾಗೂ ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಮೊದಲ ವಿಕೆಟ್‌ಗೆ 142 ರನ್ ಜೊತೆಯಾಟವಾಡಿದರು.
ವೃದ್ಧಿಮಾನ್ ಸಾಹ 43 ಎಸೆತಗಳಲ್ಲಿ 81 ರನ್ ಗಳಿಸಿದರೆ, ಶುಭಮನ್ ಗಿಲ್ 51 ಎಸೆತಗಳಲ್ಲಿ ಅಜೇಯ 94 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯಾ 25 ಗಳಿಸಿ ಔಟಾದರು. ಮಿಲ್ಲರ್ 21 ರನ್ ಗಳಿಸಿದರು. ಲಕ್ನೋ ಪರ ಮೊಹ್ಸಿನ್ ಖಾನ್ ಹಾಗೂ ಅವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು.
Innings Break!@gujarat_titans post a massive total of 227/2 on the board.#LSG chase coming up shortly. Stay tuned!
Scorecard – https://t.co/DEuRiNeIOF #TATAIPL #GTvLSG #IPL2023 pic.twitter.com/gZtj713tph
— IndianPremierLeague (@IPL) May 7, 2023
ಗುಜರಾತ್ ಟೈಟಾನ್ಸ್ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಲಕ್ನೋ ತಂಡ ಆಡಿರುವ 10 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 11 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದು ಗುಜಾರಾತ್ ಪ್ಲೇ ಆಫ್ ಟಿಕೆಟ್ ಅನ್ನು ಬಹುತೇಕ ಖಚಿತಪಡಿಸಿಕೊಳ್ಳಲು ಹವಣಿಸುತ್ತಿದೆ.
ಇದನ್ನೂ ಓದಿ : ಜಡೇಜಾ ಹೊಸ ದಾಖಲೆ : ಈ ಸಾಧನೆ ಮಾಡಿದ 8ನೇ ಕ್ರಿಕೆಟಿಗ ಜಡ್ಡು
ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
For his stupendous knock of 94* off 51 deliveries, Shubman Gill is our Top Performer from the first innings.
A look at his batting summary here 👇👇#TATAIPL #GTvLSG pic.twitter.com/DplUofHK9D
— IndianPremierLeague (@IPL) May 7, 2023
ಲಕ್ನೋ ತಂಡ
ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅವೇಶ್ ಖಾನ್