ಬೆಂಗಳೂರು : ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಆರಂಭವಾಗಿದೆ.
ಜೆ.ಪಿ ನಗರದ ಸೋಮೇಶ್ವರ ಸಭಾಭವನದಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದ್ದು, ಸಂಸದರಾದ ಪಿ.ಸಿ ಮೋಹನ್ ಹಾಗೂ ತೇಜಸ್ವಿ ಸೂರ್ಯ ಅವರು ಪ್ರಧಾನಿ ಮೋದಿಯವರಿಗೆ ಸಾಥ್ ನೀಡಿದ್ದಾರೆ.
ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಬಿಟಿಎಂ ಲೇಔಟ್, ಪದ್ಮನಾಭನಗರ, ಚಿಕ್ಕಪೇಟೆ, ಗಾಂಧಿನಗರ, ವಿಜಯ ನಗರ, ಗೋವಿಂದರಾಜು ನಗರ, ರಾಜಾಜಿನಗರ, ಮಲ್ಲೇಶ್ವರಂನಲ್ಲಿ ಕ್ಷೇತ್ರ ವ್ಯಾಪ್ತಿಗಳಲ್ಲಿ ರೋಡ್ ಶೋ ನಡೆಯಲಿದೆ.
ಪ್ರಧಾನಿ ಮೋದಿಯವರನ್ನು ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ ನೃತ್ಯದ ಮೂಲಕ ಸ್ವಾಗತಿಸಲು ಸೃಷ್ಟಿಕಲಾ ವಿದ್ಯಾಲಯದ ಕಲಾ ತಂಡ ತಯಾರಾಗಿದೆ. ರಾಜಭವನದಿಂದ ಹೊರಟ ಪ್ರಧಾನಿ ಮೋದಿ ಹೊರಡಲಿದ್ದು ಮೇಖ್ರಿ ಸರ್ಕಲ್ ಬಳಿಯ HQTC ಹೆಲಿಪ್ಯಾಡ್ ತಲುಪಿದ್ದಾರೆ. ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಲೊಯೊಲಾ ಕಾಲೇಜು ಹೆಲಿಪ್ಯಾಡ್ ಗೆ ಆಗಮಿಸಿದ್ದಾರೆ.
ಕ್ಷಣಗಣನೆ ಆರಂಭ…#NammaBengaluralliNammaModi #PoornaBahumata4BJP
2/2 pic.twitter.com/J5poS35fSr— BJP Karnataka (@BJP4Karnataka) May 6, 2023
1.30ರವರೆಗೆ ರೋಡ್ ಶೋ
ಲೊಯೊಲಾ ಕಾಲೇಜು ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಪ್ರಯಾಣಿಸಿ ಬೆಳಗ್ಗೆ 10 ಗಂಟೆಗೆ ಸೋಮೇಶ್ವರ ಭವನ ತಲುಪಿ 10 ಕಿ.ಮೀ. ವೇಗದಲ್ಲಿ ಪ್ರಧಾನಿ ರೋಡ್ ಶೋ ವಾಹನ ಸಾಗಲಿದೆ. ಬಿಬಿಎಂಪಿ ಪೌರಕಾರ್ಮಿಕರು ಸಿರ್ಸಿ ಸರ್ಕಲ್ ಬಳಿ ಬೃಹತ್ ಸಂಖ್ಯೆಯಲ್ಲಿ ಪ್ರಧಾನಿಗೆ ಪುಷ್ಪವೃಷ್ಟಿ ಮಾಡಲಿದ್ದಾರೆ. ಸಿರ್ಸಿ ಸರ್ಕಲ್‌ನಲ್ಲಿ 1 ನಿಮಿಷ ರೋಡ್ ಶೋ ವಾಹನ ನಿಲುಗಡೆ ಸಾಧ್ಯತೆ ಇದೆ.
ರೋಡ್ ಶೋದಲ್ಲಿ ಪ್ರಧಾನಿ ಜೊತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ.
ಕ್ಷಣಗಣನೆ ಆರಂಭ…#NammaBengaluralliNammaModi #PoornaBahumata4BJP
1/2 pic.twitter.com/3NEWK3cEmq— BJP Karnataka (@BJP4Karnataka) May 6, 2023
ಎಲ್ಲೆಲ್ಲಿ ಮೋದಿ ರೋಡ್ ಶೋ
ಬೆಳಗ್ಗೆ 10ಕ್ಕೆ ಸೋಮೇಶ್ವರ ಸಭಾ ಭವನ
ಬೆಳಗ್ಗೆ 10.10ಕ್ಕೆ ಜೆಪಿ ನಗರ 5ನೇ ಹಂತ
ಬೆಳಗ್ಗೆ 10.20ಕ್ಕೆ ಜಯನಗರ 5ನೇ ಬ್ಲಾಕ್
ಬೆಳಗ್ಗೆ 10.30ಕ್ಕೆ ಜಯನಗರ 4ನೇ ಬ್ಲಾಕ್
ಬೆಳಗ್ಗೆ 10.40ಕ್ಕೆ ಸೌತ್ ಎಂಡ್ ಸರ್ಕಲ್
ಬೆಳಗ್ಗೆ 10.45ಕ್ಕೆ ಮಾಧವರಾವ್ ವೃತ್ತ
ಬೆಳಗ್ಗೆ 11ಕ್ಕೆ ರಾಮಕೃಷ್ಣ ಆಶ್ರಮ
ಬೆಳಗ್ಗೆ 11.05ಕ್ಕೆ ಉಮಾ ಥಿಯೇಟರ್ ಸಿಗ್ನಲ್
ಬೆಳಗ್ಗೆ 11.15ಕ್ಕೆ ಮೈಸೂರು ರಸ್ತೆ ಸಿಗ್ನಲ್
ಬೆಳಗ್ಗೆ 11.25ಕ್ಕೆ ಟೋಲ್ ಗೇಟ್ ಸಿಗ್ನಲ್
ಬೆಳಗ್ಗೆ 11.35ಕ್ಕೆ ಗೋವಿಂದರಾಜನಗರ
ಬೆಳಗ್ಗೆ 11.45ಕ್ಕೆ ಮಾಗಡಿ ರೋಡ್ ಜಂಕ್ಷನ್
ಮಧ್ಯಾಹ್ನ 12ಕ್ಕೆ ಶಂಕರ್ ಮಠ ಚೌಕ್
ಮಧ್ಯಾಹ್ನ 12.20ಕ್ಕೆ ಮಲ್ಲೇಶ್ವರಂ ವೃತ್ತ
ಮಧ್ಯಾಹ್ನ 12.30ಕ್ಕೆ 18ನೇ ಅಡ್ಡ ರಸ್ತೆ ಜಂಕ್ಷನ್ ಸಂಪಿಗೆ ರಸ್ತೆ