ಬೆಂಗಳೂರು : ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ವಾರ್ಡ್ ನಲ್ಲಿರುವ ಆರ್.ಎಂ.ಸಿ ಯಾರ್ಡ್ ನಲ್ಲಿ ಮಾರುಕಟ್ಟೆ ವರ್ತಕರು, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರ ಸಭೆಯಲ್ಲಿ ಭಾಗವಹಿಸಿ ಮತ ಯಾಚನೆ ಮಾಡಿದರು.
ಈ ವೇಳೆ ಮಾತನಾಡಿರುವ ಅವರು, ಈ ಒಂದು ಮಾರುಕಟ್ಟೆ ದಾಸನಪುರಕ್ಕೆ ತೆರವು ಮಾಡಬೇಕು ಎಂದು ಅಂದು ಹೇಳಿದ್ದರು. ಆಗ ನಾನು ಮುಂದೆ ನಿಂತು ನಿಮ್ಮ ಕಷ್ಟ ಹಾಗೂ ಬವಣೆ ನೀಗಿಸಲು ನಾನು ಅಂದು ಹೆದ್ದಾರಿ ತಡೆ ಮಾಡಿದ್ದೆ ಎಂದು ಹೇಳಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಿಜೆಪಿ ಬದ್ಧ
ಈ ಸ್ಥಳದಲ್ಲಿರುವ ನಿಮ್ಮೆಲ್ಲರ ಅಂಗಡಿ ಮುಗ್ಗಟ್ಟುಗಳು ತೆರವು ಮಾಡದಂತೆ ಹೋರಾಟ ಮಾಡಿ ಉಳಿಸಿರುವೆ. ಜೊತೆಗೆ ನಿಮ್ಮ ಮಕ್ಕಳ ಶೈಕ್ಷಣಿಕ ಉದ್ಧಾರಕ್ಕಾಗಿ ಕ್ಷೇತ್ರದಲ್ಲಿ ಒಳ್ಳೆಯ ಗುಣಮಟ್ಟದ ಶಾಲೆ ಅಭಿವೃದ್ಧಿ ಮಾಡಲಾಗಿದೆ. ಉಚಿತ ಶಿಕ್ಷಣ ನೀಡುವಲ್ಲಿ ನಾನು ಹಾಗೂ ನಮ್ಮ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ‘ಸೋತ್ರೆ ಸೀದಾ ಮನೆಗೆ’ ಹೋಗುತ್ತದೆ : ಸಿಎಂ ಬೊಮ್ಮಾಯಿ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್ನ ಆರ್.ಎಂ.ಸಿ. ಯಾರ್ಡ್ನಲ್ಲಿ ಮಾರುಕಟ್ಟೆ ವರ್ತಕರು ಹಾಗೂ ಕೂಲಿ ಕಾರ್ಮಿಕರ ಸಭೆಯಲ್ಲಿ ಪಾಲ್ಗೊಂಡು ಮತ ಯಾಚಿಸಲಾಯಿತು. ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ಸರ್ಕಾರದ ಸಾಧನೆಗಳನ್ನು ತಿಳಿಸಲಾಯಿತು.#ಬಿಜೆಪಿಯೇ_ಭರವಸೆ @BJP4Karnataka pic.twitter.com/SiIBfp9bRc
— K Gopalaiah (@GopalaiahK) May 4, 2023
ಮತ್ತೊಮ್ಮೆ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿ
ಕೋವಿಡ್ ಸಂಕಷ್ಟದಲ್ಲಿ ಫುಡ್ ಕಿಟ್ ಔಷಧಿ ಕಿಟ್ ಹಾಗೂ ಆಕ್ಸಿಜನ್ ಸೇರಿದಂತೆ ಹಲವು ರೀತಿಯ ಸಹಾಯ ಮಾಡಿದ್ದೇನೆ. ಇದೇ 10ನೇ ತಾರೀಖು ತಾವೆಲ್ಲರೂ ತಪ್ಪದೆ ಬಿಜೆಪಿ ಪಕ್ಷದ ಚಿನ್ಹೆ ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ನಮ್ಮನ್ನ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ಆ ಮೂಲಕ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನರೇಂದ್ರಬಾಬು, ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಎಂ ಮಹದೇವ್ ವಾರ್ಡ್ ಅಧ್ಯಕ್ಷ ಡಾಕ್ಟರ್ ನಾಗೇಂದ್ರ, ಸ್ಥಳೀಯ ಮುಖಂಡರುಗಳಾದ ಮಲ್ಲಪ್ಪ, ಉಮಾಪತಿ ನಾಯ್ಡು, ಸಾಯಿ ರೆಡ್ಡಿ, ಪುಟ್ಟ ಸ್ವಾಮಿ, ರಾಘವೇಂದ್ರ ಸುರೇಶ್ ಸೇರಿದಂತೆ ಆರ್ ಎಂ ಸಿ ಯಾರ್ಡ್ ನ ಪ್ರಮುಖರು ಉಪಸ್ಥಿತರಿದ್ದರು.