ಬೆಂಗಳೂರು : ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ‘ಪ್ರಚಾ ಪ್ರಣಾಳಿಕೆ’ ರಾಜ್ಯದ ಜನರಿಗೆ ಇಷ್ಟವಾಗಿದೆ ಎಂದು ಕೃಷಿ ಸಚಿವ ಹಾಗೂ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಹೇಳಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರು ಮತಕ್ಷೇತ್ರದ ಯಲ್ಲಾಪುರ ಗ್ರಾಮದಲ್ಲಿ ಸಚಿವ ಬಿ.ಸಿ ಪಾಟೀಲ್ ಇಂದು ಪ್ರಚಾರ ಕಾರ್ಯಕೈಗೊಂಡರು. ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿ ರಾಜ್ಯದ ಜನರು ಅಭಿವೃದ್ಧಿ ಪರವಾಗಿದ್ದಾರೆ. ಮತ್ತೊಮ್ಮೆ ನಾವು ಅಧಿಕಾರಿಕ್ಕೆ ಬರೋದು ಖಚಿತ. ಬಿಜೆಪಿ ಪ್ರಜಾ ಪ್ರಣಾಳಿಕೆಯಲ್ಲಿ ರೈತರಿಗೆ (ಕೃಷಿ ಕ್ಷೇತ್ರ) ಹೆಚ್ಚು ಆದ್ಯತೆ ನೀಡಲಾಗಿದೆ. ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಚುನಾವಣೆಯಲ್ಲಿ ಪಕ್ಷವನ್ನು ಕೈ ಹಿಡಿಯಲಿದೆ ಎಂದು ಬಿ.ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ‘ಸೋತ್ರೆ ಸೀದಾ ಮನೆಗೆ’ ಹೋಗುತ್ತದೆ : ಸಿಎಂ ಬೊಮ್ಮಾಯಿ
ಯಲ್ಲಾಪುರ ನಮ್ಮ ತಾಯಿ ಊರು
ಯಲ್ಲಾಪುರ ನಮ್ಮ ತಾಯಿ ಊರು. ಈ ಊರಿಗೆ ನಮಗೆ ಸಂಬಂಧ ಇದೆ. ಅಲ್ಲದೇ ಪ್ರತಿ ಗ್ರಾಮಗಳ ಕೆರೆ ತುಂಬಿಸುವ ಗುರಿಯಾಗಿದೆ. ಈಗಾಗಲೇ ಮುಗಿಯುವ ಅಂತಕ್ಕೆ ಬಂದಿದೆ. ರಸ್ತೆ, ದೇವಸ್ಥಾನ, ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದೆ. ಹೀಗಾಗಿ, ಮತ್ತೊಮ್ಮೆ ಬಿಜೆಪಿ ಮತ ನೀಡಿ ಸುಭದ್ರ ಸರ್ಕಾರ ನಡೆಸಲು ಅವಕಾಶ ನೀಡಿ ಎಂದು ಮತದಾರರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಿ.ಎಂ ಸಾಲಿ, ಈಟೇರವರು, ಪಾಲಾಕ್ಷ ಗೌಡ್ರು ದೊಡ್ಡ ಗೌಡ್ರು, ಬಿ.ಎನ್ ಬಣಕಾರ್, ಆರ್.ಎನ್ ಗಂಗೊಳ, ಲಿಂಗರಾಜ ಚಪ್ಪರದಳ್ಳಿ, ಗಂಗಾಧರ್, ಸೃಷ್ಟಿ ಪಾಟೀಲ, ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.