Friday, November 22, 2024

ತವರು ಅಂಗಳದಲ್ಲೇ ಆರ್​ಸಿಬಿಗೆ ಹೀನಾಯ ಸೋಲು

ಬೆಂಗಳೂರು : ಇಂದು ನಡೆದ ಐಪಿಎಲ್ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ( Kolkata Knight Riders) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ಗೆಲ್ಲಲು 201 ರನ್ ಗಳಿಸಬೇಕಿದ್ದ ಆರ್​ಸಿಬಿ ಆರಂಭದಲ್ಲೇ ಮುಗ್ಗರಿಸಿತು. ವಿರಾಟ್ ಕೊಹ್ಲಿ ಅರ್ಧಶತಕ (54) ಹೊಡೆದದ್ದು ಬಿಟ್ಟರೆ, ಯಾರೂ ಜವಾಬ್ದಾರಿಯುತವಾಗಿ ಆಡಿಲ್ಲ. ಆರಂಭಿಕ ಆಟಗಾರ ಡುಪ್ಲೆಸಿಸ್ (17), ಮ್ಯಾಕ್ಸ್​ವೆಲ್ (5), ಶಹಬಾಝ್ (2), ಮಹಿಪಾಲ್ (34), ದಿನೇಶ್ ಕಾರ್ತಿಕ್ (22) ರನ್ ಗಳಿಸಿದರು.

ಅಂತಿಮವಾಗಿ ಆರ್​ಸಿಬಿ 8 ಕಳೆದುಕೊಂಡು 179 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನೂ ಕೆಕೆಆರ್ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದು ಮಿಂಚಿದರು. ಸುಯೆಶ್ ಮತ್ತು ರಸೆಲ್ ತಲಾ 2 ವಿಕೆಟ್ ಪಡೆದರು.

‘ಕೈ’ ಹಿಡಿಯಲಿಲ್ಲ ಡಿಕೆ

ಇನ್ನೂ ಟೂರ್ನಿಯ ಆರಂಭದಿಂದಲೂ ದಿನೇಶ್ ಕಾರ್ತಿಕ್ ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಾ ಬಂದಿದ್ದಾರೆ. ಡಿಕೆ ಬ್ಯಾಟ್​ನಿಂದ ಟೂರ್ನಿಯಲ್ಲಿ ಒಮ್ಮೆಯೂ ಮ್ಯಾಚ್ ವಿನ್ನಿಂಗ್ ಸ್ಕೋರ್ ಬಂದಿಲ್ಲ. ಇಂದು ಅಭಿಮಾನಿಗಳು ಡಿಕೆ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದರು. ಆದರೆ, 18 ಎಸೆತದಲ್ಲಿ 1 ಸಿಕ್ಸ್ ಹಾಗೂ 1 ಬೌಂಡರಿಯೊಂದಿಗೆ 22 ರನ್ ಗಳಿಸಿ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.

ಆರ್​ಸಿಬಿ ಕಳಪೆ ಫೀಲ್ಡಿಂಗ್

ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ವಿಕೆಟ್​ಗಳ ಹುಡುಕಾಟದಲ್ಲಿದ್ದಾಗ ಬೌಲರ್​ಗಳೇ ಕ್ಯಾಚ್​ಗಳನ್ನು ಕೈಚೆಲ್ಲಿದ್ದು ಕೆಕೆಆರ್​ಗೆ ವರದಾನವಾಗಿತು. ಎರಡು ಜೀವದಾನ ಪಡೆದಿದ್ದ ನಾಯಕ ನಿತೀಶ್ ರಾಣಾ 21 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಬೌಂಡರಿಯೊಂದಿಗೆ 48 ರನ್ ಗಳಿಸಿದರು. ಆ ಮೂಲಕ ಕೆಕೆಆರ್ 201 ರನ್​ಗಳ ಬೃಹತ್ ಗುರಿ ನೀಡಿತು.

RELATED ARTICLES

Related Articles

TRENDING ARTICLES