ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಒತ್ತಡದ ನಡುವೆಯೂ ಕೃಷಿ ಸಚಿವ ಬಿ.ಸಿ ಪಾಟೀಲ್ ಕುಟುಂಬಕ್ಕೆ ಒತ್ತು ನೀಡಿದ್ದಾರೆ. ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಇಂದು ತಮ್ಮ ಗೃಹ ಕಚೇರಿಯಲ್ಲಿ ಪತ್ನಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಹೌದು. ಪತ್ನಿ ವನಜಾ ಪಾಟೀಲ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಹಿತೈಷಿಗಳು ಮತ್ತು ಆತ್ಮೀಯರು ಪಾಲ್ಗೊಂಡಿದ್ದಾರೆ.
ಎಂದೆಂದೂ ಹೀಗೆ ಜೊತೆಯಾಗಿರು
ನನ್ನೊಂದಿಗೆ ಎಂದೆಂದೂ ಹೀಗೆ ಜೊತೆಯಾಗಿರು ಎಂದು ಬಿ.ಸಿ ಪಾಟೀಲ್ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಜೊತೆಗಿನ ತಮ್ಮ ಫೋಟೋ ಹಂಚಿಕೊಂಡಿದ್ದಾರೆ. ಜೀವನದ ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ಸದಾ ನನ್ನ ಬೆನ್ನೆಲುಬಾಗಿ ನಿಂತು, ನನಗೆ ಶಕ್ತಿ ತುಂಬಿ, ನನ್ನ ಶ್ರೇಯೋಭಿವೃದ್ಧಿ ಬಯಸುವ ಪ್ರೀತಿಯ ಧರ್ಮಪತ್ನಿ ವನಜಾ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಜೀವನದ ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ಸದಾ ನನ್ನ ಬೆನ್ನೆಲುಬಾಗಿ ನಿಂತು, ನನಗೆ ಶಕ್ತಿ ತುಂಬಿ, ನನ್ನ ಶ್ರೇಯೋಭಿವೃದ್ಧಿ ಬಯಸುವ ಪ್ರೀತಿಯ ಧರ್ಮಪತ್ನಿ ಶ್ರೀಮತಿ ವನಜಾ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ನನ್ನೊಂದಿಗೆ ಎಂದೆಂದೂ ಹೀಗೆ ಜೊತೆಯಾಗಿರಿ. pic.twitter.com/aITNPoSQUI
— B C Patil (@bcpatilkourava) April 20, 2023
ಇದನ್ನೂ ಓದಿ : ನಾಮಪತ್ರ ಸಲ್ಲಿಕೆಗೂ ಮುನ್ನ ಮತ ಬೇಟೆಗಿಳಿದ ‘ಕೌರವ’ ಪಾಟೀಲ್
ಬಿಜೆಪಿ ಸೇರಿದ ‘ಕೈ‘ ನಾಯಕರು
ಚುನಾವಣೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು ಈ ನಡುವೆ ಹಾವೇರಿ ಜಿಲ್ಲೆಯ ಸ್ಟಾರ್ ಕ್ಯಾಂಪಿಯನ್ ಹಾಗೂ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಬೆಂಬಲಿಸಿ ಇಂದು ಹಿರೇಕೆರೂರಿನ ಕರವೇ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಹಿರೇಕೆರೂರು ಮತಕ್ಷೇತ್ರದ ರಟ್ಟೀಹಳ್ಳಿ ತಾಲೂಕಿನಲ್ಲಿ ಮುಸ್ಲಿಂ ಮುಖಂಡರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ನಮ್ಮ ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಕಾಂಗ್ರೆಸ್ ಪಕ್ಷವನ್ನು ತೊರೆದು ಇಂದು ನನ್ನ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಏರ್ಪಡೆಯಾದರು. ಪಕ್ಷದ ಶಾಲು ಹಾಕುವ ಮೂಲಕ ಅವರನ್ನು ಪಕ್ಷಕ್ಕೆ ಸ್ವಾಗತಿಸಿಕೊಂಡು, pic.twitter.com/DOeKUaE90f
— B C Patil (@bcpatilkourava) April 20, 2023
ರಟ್ಟಿಹಳ್ಳಿ ತಾಲೂಕಿನ ಕರವೇ ಸಂಘಟನೆ ಹಾಗೂ ರಟ್ಟಿಹಳ್ಳಿ ಮುಸ್ಲಿಂ ಸಮಾಜದ 21 ಪ್ರಮುಖ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಗಣ್ಯರು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು. ದೀನೆ ದೀನೇ ಬಿಜೆಪಿ ಪಕ್ಷಕ್ಕೆ ಬೆಂಬಲ ಸಿಗ್ತಾ ಇರೋದು ಬಿ.ಸಿ ಪಾಟೀಲ್ ಗೆಲುವಿಗೆ ಮತ್ತಷ್ಟು ಶಕ್ತಿ ಬಂತಾಗಿದೆ.